ಒಂದೊಳ್ಳೆ ಲವ್ ಸ್ಟೋರಿ ಬಿಡುಗಡೆಗೆ ಸಿದ್ದತೆ

ಹೊಸ ತಂಡ ಉತ್ಸಾಹದಲ್ಲಿ ತಯಾರು ಮಾಡಿದ ಒಂದೊಳ್ಳೆ ಲವ್ ಸ್ಟೋರಿ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರಕ್ಕೆ ನಿರ್ಮಾಪಕ‌ ನಿರಂಜನ್ ಬಾಬು ಬಂಡವಾಳ ಹಾಕಿದ್ದಾರೆ. ನಾಯಕ    ಅಶ್ವಿನ್  ನಿರ್ಮಾಣಲ್ಲಿ ಕೈಜೋಡಿಸಿದ್ದಾರೆ.

ಈ ವೇಳೆ ಮಾತನಾಡಿದ ನಿರಂಜನ ಬಾಬು, ಕನ್ನಡಕ್ಕಾಗಿ ಸಿನಿಮಾ ಮಾಡಿದ್ದೇವೆ.  ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೆವು. ಹಾಗಾಗಿ ತಡ ಆಯಿತು. ನಾಯಕ ಅಶ್ವಿನ್ ಅವರೇ ಕಥೆ ಬರೆದಿದ್ದಾರೆ

ಮುಂದಿನ ತಿಂಗಳು ಬಿಡುಗಡೆ  ಮಾಡುವ ಉದ್ದೇಶವಿದೆ.ಪುನೀತ್ ರಾಜ್ ಕುಮಾರ್ , ಶಿವರಾಜ್ ಕುಮಾರ್ , ರಮೇಶ್ ಅರವಿಂದ್ ಮತ್ತಿತರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿಮ್ಮ ಸಹಕರವೂ ಇರಲಿ ಎಂದರು.

ನಾಯಕ ಅಶ್ವಿನ್ ಮಾತನಾಡಿ,  ಅಪ್ಪ ಮಗನ ಸಂಬಂದ ಚಿತ್ರದಲ್ಲಿ.ಜೊತೆಗೆ ಒಳ್ಳೆಯ ಅಂಶ ಚಿತ್ರದಲ್ಲಿದ್ದು ಅದು ಏನು ಅನ್ನುವುದನ್ನು ಹೇಳಿದರೆ ಕಥೆ ಬಿಟ್ಟಿಕೊಟ್ಟಂತಾಗಲಿದೆ ಸಹಕಾರವಿರಲಿ ಎಂದರು.

ನಾಯಕಿ ಧನುಶ್ರೀ,  ವಿಭಿನ್ನ ಪಾತ್ರ,  ಹುಡುಗಿ ಜೀವನದಲ್ಲಿ ನಂಬಿಕೆ ಕಳೆದುಕೊಂಡವಳು.  ಹುಡುಗ ಪ್ರೀತಿಯಲ್ಲಿ ಕಳೆದುಕೊಂಡ.ಇವರಿಬ್ಬರ ಕಥೆ ಎಂದರು. ಮತ್ತೊಬ್ಬ ನಟಿ‌ ನಿಶಾ ಹೆಗ್ಗೆ, ಜೋಗುಳ ಧಾರಾವಾಹಿಯಲ್ಲಿ ನಟಿಸಿದ್ದೆ. .  ನಾಯಕಿಯ ಸ್ನೇಹಿತೆಯ ಪಾತ್ರ ಎಂದರು. ವಿತರಕ ವೆಂಕಟ್ ಗೌಡ, ಸಂಗೀತ ನಿರ್ದೇಶಕ ಅಕಾಶ್ ಜಾಧವ್ ಚಿತ್ತದ ಬಗ್ಗೆ ಮಾಹಿತಿ ನೀಡಿದರು.