ಒಂದೇ ಸೂರಿನಡಿ ಅಬಕಾರಿ ಚಟುವಟಿಕೆ

ಬೆಂಗಳೂರು, ಜ.೧೧- ಅಬಕಾರಿ ಇಲಾಖೆಯ ಎಲ್ಲಾ ಚಟುವಟಿಕೆಗಳು ಹಾಗೂ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಆರಣ್ಯ ಭವನ ಮಾದರಿಯಲ್ಲಿ ಅಬಕಾರಿ ಭವನ ನಿರ್ಮಿಸಲಾಗುವುದು ಎಂದು ಅಬಕಾರಿ ಸಚವ ಎಚ್.ನಾಗೇಶ್ ಪ್ರಕಟಿಸಿದರು.ನಗರದಲ್ಲಿಂದು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಬಕಾರಿ ಇಲಾಖೆ ಪುನರ್ ರಚನೆ
ಆದಾಯ ಸೋರಿಕೆ ತಡೆಯಲು ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ೧೩ ವರ್ಷ ಬಳಿಕ ಅಬಕಾರಿ ಇಲಾಖೆಯನ್ನು ಪುನರ್ ರಚಿಸಿದ್ದೇನೆ. ಈ ಕ್ರಮದಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಬಿದ್ದರೆ ಮತ್ತಷ್ಟು ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ಸಹಾಯವಾಗಿದೆ ಎಂದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಳ್ಳಭಟ್ಟಿ ಕೇಂದ್ರಗಳ ಮೇಲೆ ನಿಗಾವಹಿಸಿ ಮಟ್ಟಹಾಕಬೇಕು. ಕಲಬೆರಕೆ ಸೇಂದಿ, ಕಳ್ಳಭಟ್ಟಿ, ಮದ್ಯ ತಯಾರಿಕೆ, ಸಂಗ್ರಹ ಹಾಗೂ ಅದರ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳ ಒದಗಿಸುವವರ ಮೇಲೆ ನಿಗಾವಹಿಸಿ ಕಠಿಣ ಕ್ರಮ ಕೈಗೊಂಡಿದ್ದೇನೆ ಎಂದರು.
ರಕ್ಷಕರ ಪದನಾಮ ಬದಲು
ಅಬಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಕರನ್ನು ಅಬಕಾರಿ ಪೇದೆ ಹಾಗೂ ಹಿರಿಯ ರಕ್ಷಕರನ್ನು ಅಬಕಾರಿ ಮುಖ್ಯಪೇದೆ ನಾಮಕಾರಣ ಮಾಡಿದ್ದೇನೆ. ಶೀಘ್ರದಲ್ಲೇ ಪದನ್ನೋತಿ ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡಲಿದ್ದೇವೆ ಎಂದ ಅವರು, ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಚರ್ಚೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಈಗಾಗಲೇ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ.
ಆದಾಯ ಹೆಚ್ಚಿಸಲು ಕ್ರಮ, ಅಬಕಾರಿ ಅಧಿಕಾರಿಗಳಿಗೆ ಮತ್ತು ಉಪ ನಿರೀಕ್ಷರಿಗೆ ಹೊಸ ವಾಹನಗಳನ್ನು ನೀಡಿಕೆ, ಅಕ್ರಮ, ನಕಲಿ ಮದ್ಯ, ಮಾದಕ ವಸ್ತುಗಳ ಬಳಕೆಯನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ ಎಂದು ವಿವರಿಸಿದರು.
ಅಬಕಾರಿ ಅಕಾಡೆಮಿ ಸ್ಥಾಪನೆ ಚಿಂತನೆ,
ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದು ಕೊಡುವ ಅಬಕಾರಿ ಇಲಾಖೆಗೆ ತನ್ನ ಸಿಬ್ಬಂದಿಗೆ ತರಬೇತಿ ನೀಡಲು ರಾಜ್ಯದಲ್ಲಿ ಸ್ವಂತ ತರಬೇತಿ ಕೇಂದ್ರವೇ ಇಲ್ಲ. ಈ ಕೊರತೆ ನೀಗಿಸಲು ಇಲಾಖೆ ಹೊಸದಾಗಿ ‘ಅಬಕಾರಿ ಅಕಾಡೆಮಿ’ ಸ್ಥಾಪಿಸಲು ನಿರ್ಧರಿಸಿದ್ದೇನೆ. ಅಕಾಡೆಮಿ ಸ್ಥಾಪಿಸುವುದಕ್ಕಾಗಿ ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಈಗಾಗಲೇ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ನಾಗೇಶ್ ಹೇಳಿದರು.
ಬೈಕ್ ಭಾಗ್ಯ: ರಾಜಸ್ವ ಹೆಚ್ಚಳ ಹಾಗೂ ಅಕ್ರಮ ಮದ್ಯ ಮಾರಾಟ ತಡೆಯುವ ಉದ್ದೇಶದಿಂದ ಅಬಕಾರಿ ಇಲಾಖೆಯು ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಬೈಕ್ ಭಾಗ್ಯ ನೀಡಲಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಈಗಾಗಲೇ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ಹೊಸ ಯೋಜನೆ ತರುವ ಆಲೋಚನೆಗಳಿವೆ ಎಂದು ವಿವರಿಸಿದರು.
ಅಬಕಾರಿ ಸಚಿವನಾಗಿ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕೊರೋನಾ
ಸಂಕಷ್ಟದಲ್ಲಿಯೂ ಸರ್ಕಾರಕ್ಕೆ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರಲು ಶ್ರಮಿಸಿದ್ದೇನೆ. ಬರುವ ದಿನಗಳಲ್ಲಿ ಇಲಾಖೆಗೆ ಮತ್ತಷ್ಟು ಕಾಯಕಲ್ಪ ನೀಡಲು ಮುಂದಾಗಿದ್ದೇನೆ ಎಂದು ಅವರು ನುಡಿದರು.