ಒಂದೇ ಸಿರಿಂಜ್ ಬಳಸಿ ೩೦ ವಿದ್ಯಾರ್ಥಿಗಳಿಗೆ ಲಸಿಕೆ

ಮಧ್ಯಪ್ರದೇಶ, ಜು.೨೮- ಒಂದೇ ಸಿರಿಂಜ್ ಬಳಸಿ ಬರೋಬ್ಬರಿ ೩೦ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿರುವ ಆತಂಕಕಾರಿ ಘಟನೆ ಇಲ್ಲಿನ ಮಧ್ಯಪ್ರದೇಶದ ಸಾಗರ್‌ನಲ್ಲಿ ನಡೆದಿದೆ.

ಸಾಗರ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಒಂದೇ ಸಿರಿಂಜ್‌ನಿಂದ ಮಕ್ಕಳಿಗೆ ಲಸಿಕೆ ಹಾಕುತ್ತಿರುವುದನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ, ಈ ಕುರಿತು ಪ್ರತಿಕ್ರಿಯಿಸಿದ
ಲಸಿಕೆದಾರರಾದ ಜಿತೇಂದ್ರ, ಅಧಿಕಾರಿಗಳು ಕೇವಲ ಒಂದು ಸಿರಿಂಜ್ ಅನ್ನು ಕಳುಹಿಸಿದ್ದಾರೆ. ಜತೆಗೆ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು ಇಲಾಖೆಯ ಮುಖ್ಯಸ್ಥರು ಅವರಿಗೆ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ.

ಸಿರಿಂಜ್ ಮಾನದಂಡ ಪ್ರಕಾರ, ಎಚ್‌ಐವಿ ಹರಡಲು ಆರಂಭಿಸಿದಾಗಿನಿಂದ ಬಳಸಿ ಬಿಸಾಡಬಹುದಾದ ಏಕ ಬಳಕೆಯ ಸಿರಿಂಜ್‌ಗಳನ್ನೇ ಬಳಸಬೇಕಾಗಿದೆ. ಆದರೆ, ಈ ವ್ಯಕ್ತಿ ಒಂದೇ ಸಿರಿಂಜ್ ಅನ್ನು ೩೦ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಬಳಸಿರುವುದು ಆತಂಕ ಹೆಚ್ಚಿಸಿದೆ.