ಒಂದೇ ರಾತ್ರಿ ನಾಲ್ಕು ದೇವಸ್ಥಾನ ಕದ್ದ ಖತರ್ನಾಕ ಕಳ್ಳರು

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೧೮- ತಾಲೂಕಿನ ಗೋರೆಬಾಳ ಕ್ಯಾಂಪ್, ಸಾಸಲಮರಿ ಕ್ಯಾಂಪ್ ಒಳಗೊಂಡು ಒಟ್ಟು ನಾಲ್ಕು ದೇವಸ್ಥಾನಗಳನ್ನು ಒಂದೇ ರಾತ್ರಿ ಕಳ್ಳತನ ಮಾಡಿದ್ದಾರೆ.
ಗೋರೆಬಾಳ ಕ್ಯಾಂಪ್ ನಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ಕಿರಿಟ, ಕಾಣಿಕೆ ಹುಂಡಿ ಹೊಡೆದಿದ್ದಾರೆ ಅದೇ ಕ್ಯಾಂಪ್‌ನಲ್ಲಿನ ರಾಮಲಾಯ ದೇವಸ್ಥಾನದಲ್ಲಿ ಮೂರ್ತಿಯ ಕಣ್ಣು ಕದ್ದಿದ್ದು, ರಸ್ತೆಯ ಮಧ್ಯದಲ್ಲಿನ ಮರಳು ಸಿದ್ದೇಶ್ವರ ಮಠದಲ್ಲಿ ಮಾಂಗಲ್ಯ ಸರ, ಮೂಗುತಿ, ೮೦ ಸಾವಿರ ರೂ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದಿದ್ದಾರೆ ಮತ್ತು ಸಾಸಲಮರಿಕ್ಯಾಂಪ್ ತಾಯಮ್ಮ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ.
ಶನಿವಾರ ಮಧ್ಯರಾತ್ರಿ ೧೨-೩೦ ರ ಸುಮಾರಿಗೆ ಕಾರಿನಲ್ಲಿ ಬಂದ ಮೂರು ಜನ ಕಳ್ಳರು ಒಂದೇ ರಾತ್ರಿ ಇಷ್ಟೆಲ್ಲಾ ಕಳ್ಳತನ ಮಾಡಿದ ಬಗ್ಗೆ ಸಿಸಿ ಕ್ಯಾಮರಗಳಲ್ಲಿ ದಾಖಲಾಗಿದ್ದು, ಬೆಳಗ್ಗೆ ಗ್ರಾಮೀಣ ಠಾಣೆ ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ದೇವಸ್ಥಾನದ ಅರ್ಚಕರು, ಸಮಿತಿಯವರಿಂದ ಮಾಹಿತಿ ಪಡೆದು ಪ್ರಕರಾಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬಿಸಿದ್ದಾರೆ.