ಒಂದೇ ರಸ್ತೆಗೆ ಮೂರು ಯೋಜನೆ ಅನುದಾನ

ಗಬ್ಬೂರು.ಸೆ.೨೨-ದೇವದುರ್ಗ ತಾಲೂಕಿನ ಬೂದಿನಾಳ ಗ್ರಾಮದಲ್ಲಿ ಒಂದೇ ರಸ್ತೆಗೆ ಮೂರು ಯೋಜನೆ ಅನುದಾನದಲ್ಲಿ ಕೋಟಿ ಕೋಟಿ ಹಣ ಬಿಡುಗಡೆಯಾದರೂ, ದುರಸ್ತಿಯಾಗದ ರಸ್ತೆ ಕೂಡಲೇ ದುರಸ್ತಿ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಜಡೆಪ್ಪ ಸಾಹು ಮತ್ತು ಹನುಮಂತ, ಮುಖ್ಯ ಅಭಿಯಂತರರು ಸಂಪರ್ಕ ಈಶಾನ್ಯ ಕರ್ನಾಟಕ ವಲಯ ಕಲಬುರ್ಗಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನೆನಗುದಿಗೆ ಬಿದ್ದಿರುವ ಒಂದೇ ರಸ್ತೆಗೆ ಮೂರು ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ.ರಸ್ತೆ ದುರಸ್ತಿ ಮಾಡದೆ ತುಕ್ಕುಹಿಡಿದಿದೆ.ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸಬೇಕಾಗಿದೆ.ಸರ್ಕಾರದಿಂದ ಯೋಜನೆ ಕಾಮಗಾರಿ ಪೂರ್ಣಗೊಳಿಸದಿರುವುದು ಸಂಬಂಧಿಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ದಿವ್ಯ ನಿರ್ಲಕ್ಷ್ಯ, ಇಂಜಿನಿಯರಿಂಗ್ ಬನ್ನಪ್ಪ ಅವರನ್ನು ಮಾಹಿತಿ ಕೇಳಿದರೆ ಗೂಂಡಾವರ್ತನೆಯ ಮಾತನಾಡುತ್ತಾನೆ.
೨೦೧೪-೧೫ನೇ ಸಾಲಿನಲ್ಲಿ ೧.೨೯ ಕೋಟಿ,೨೦೧೭-೧೮ ನೇ ಸಾಲಿನಲ್ಲಿ ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯಲ್ಲಿ ೨.೫ ಕೋಟಿ, ೨೦೨೨-೨೩ ನೇ ಸಾಲಿನಲ್ಲಿ ಕೆಕೆಆರ್ ಡಿಬಿ ಯೋಜನೆಯಲ್ಲಿ ೧ಕೋಟಿ ಅನುದಾನವನ್ನು ಬಳಿಸಲಾಗಿದೆ. ಒಟ್ಟು ೪.೩೪ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಖರ್ಚಾದರೂ ರಸ್ತೆ ಮಾತ್ರ ಸುಧಾರಣೆ ಕಂಡಿಲ್ಲ.
ಈಗಾಗಲೇ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದ್ದು ಆದರೆ ಈ ಕಾಮಗಾರಿ ಅಂದಾಜು ಪತ್ರಕೆ ಪ್ರಕಾರ ಕೈಗೊಳ್ಳದೆ ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ ತೀರಾ ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿದ್ದಾರೆ.
ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ದಾಖಲೆಗಳನ್ನು ಪರಿಶೀಲಿಸಿ ಬೋಗಸ್ ಬಿಲ್ ಮಾಡಿದ ಭ್ರಷ್ಟ ಅಧಿಕಾರಿಗಳಾದ ಲೋಕೋಪಯೋಗಿ ಇಲಾಖೆ ಇಇ ಚನ್ನಬಸಪ್ಪ ಮೆಕಾಲೆ, ದೇವದುರ್ಗಎಇಇ ನುಸ್ರರತ್ ಅಲಿ, ಹಾಗೂ ಇಂಜಿನಿಯರ್ ಬನ್ನಪ್ಪ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಜಡೆಪ್ಪ ಸಾಹು ಆದ್ರಿ ಬಿ.ಗಣೇಕಲ್, ಹನಮಂತ ಸಮುದ್ರ ಆಕ್ರೋಶ ವ್ಯಕ್ತಪಡಿಸಿದರು.