ಒಂದೇ ದಿನ 530 ಮಂದಿ ಸಾವು, 26811 ಜನರಿಗೆ ಸೋಂಕು, 40471 ಚೇತರಿಕೆ

ಬೆಂಗಳೂರು, ಮೇ 26- ರಾಜ್ಯದಲ್ಲಿ ಇಂದು ಗುಣಮುಖರಾದವರ ಪ್ರಮಾಣ ಏರಿಕೆಯಾಗಿದ್ದು, ಇಂದು 40471 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಒಟ್ಟು 2062910 ಮಂದಿ ಚೇತರಿಸಿಕೊಂಡಿದ್ದಾರೆ.
26811 ಮಂದಿಗೆ ಹೊಸ ಸೋಂಕು ತಗುಲಿದ್ದು, ಈ ಮೂಲಕ 409924 ಮಂದಿ ಚೇತರಿಕೆ ಕಂಡಿದ್ದಾರೆ. ಇಂದು ನಿನ್ನೆಗಿಂತ ಸಾವಿನ ಪ್ರಮಾಣ ಇಳಿಕೆ ಕಂಡಿದ್ದು, 530 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 26920 ಏರಿಕೆಯಾಗಿದೆ. ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2499784 ಕ್ಕೆ ಏರಿಕೆಯಾಗಿದೆ ಎಂದ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಖಚಿತ ಶೇಕಡವಾರು ಪ್ರಕರಣದಲ್ಲಿ ಇಳಿಕೆಯಾಗಿದ್ದು ಶೇ.19.48 ಖಚಿತ ಪ್ರಕರಣಗಳಿವೆ. ಸಾವಿನ ಪ್ರಮಾಣ ಶೇ.1.97 ರಷ್ಷಿದೆ.
ಬೆಂಗಳೂರಿನಲ್ಲಿ ಸಾವಿನ ಪ್ರಮಾಣವು ಇಳಿಕೆಯಾಗುತ್ತಿಲ್ಲ ಇಂದು 285 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 12148 ಮೃತಪಟ್ಟಿದ್ದಾರೆ. ನಗರದಲ್ಲಿ ಚೇತರಿಕೆ ಪ್ರಮಾಣ ಏರಿಕೆಯಾಗುತ್ತಿದ್ದು,18342 ಮಂದಿ ಬಿಡುಗಡೆ ಹೊಂದಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 918423ಕ್ಕೇರಿದೆ. ಇಂದು 6433 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 1137929ಕ್ಕೆ ಏರಿಕೆಯಾಗಿದೆ ಎಂದು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 245, ಬಳ್ಳಾರಿ 796, ಬೆಳಗಾವಿ 1205, ಬೆಂಗಳೂರು ಗ್ರಾಮಾಂತರ 740, ಬೆಂಗಳೂರು ನಗರ 6433, ಬೀದರ್ 61, ಚಾಮರಾಜನಗರ 425, ಚಿಕ್ಕಬಳ್ಳಾಪುರ 313, ಚಿಕ್ಕಮಗಳೂರು 585, ಚಿತ್ರದುರ್ಗ 431, ದಕ್ಷಿಣಕನ್ನಡ 729, ದಾವಣಗೆರೆ 1309, ಧಾರವಾಡ 853, ಗದಗ 393, ಹಾಸನ 1471, ಹಾವೇರಿ 330, ಕಲಬುರಗಿ 175, ಕೊಡಗು 296, ಕೋಲಾರ 907, ಕೊಪ್ಪಳ 491, ಮಂಡ್ಯ 805, ಮೈಸೂರು 2792, ರಾಯಚೂರು 265, ರಾಮನಗರ 249, ಶಿವಮೊಗ್ಗ 839, ತುಮಕೂರು 1399, ಉಡುಪಿ 973, ಉತ್ತರಕನ್ನಡ 786, ವಿಜಯಪುರ 337 ಮತ್ತು ಯಾದಗಿರಿ ಜಿಲ್ಲೆಯಲ್ಲಿ 187 ಪ್ರಕರಣಗಳು ದಾಖಲಾಗಿವೆ.