ಬೆಂಗಳೂರು, ಅ.೧೦-ರಾಜಧಾನಿ ಬೆಂಗಳೂರಿನಲ್ಲಿ ನೇರಳೆ ಮಾರ್ಗದ ವಿಸ್ತರಿತ ಮೆಟ್ರೋ ರೈಲು ಸಂಚಾರ ಆರಂಭಗೊಂಡ ಒಂದೇ ದಿನ ೩.೩೫ಲಕ್ಷ ಜನ ಸಂಚರಿಸಿ ದಾಖಲೆ ಬರೆಯಲಾಗಿದೆ.
ನಿನ್ನೆಯಿಂದಲೇ ಚಲ್ಲಘಟ್ಟ-ವೈಟ್‌ಫೀಲ್ಡ್ ಮೆಟ್ರೋ ಸಂಚಾರ ಆರಂಭವಾಗಿದ್ದೆ ತಡ ಒಂದೇ ದಿನ ೩.೩೫ಲಕ್ಷ ಜನ ಸಂಚಾರಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮ ತಿಳಿಸಿದೆ.
ಸೋಮವಾರ ಬೆಳಗ್ಗೆ ೫ ಗಂಟೆಗೆ ಬಹುನಿರೀಕ್ಷಿತ ಚಲ್ಲಘಟ್ಟ-ವೈಟ್‌ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪ್ರಾರಂಭಗೊಂಡಿತು. ಮೊದಲ ದಿನ ರಾತ್ರಿ ೯ ಗಂಟೆವರೆಗೆ ಹೆಚ್ಚುವರಿ ೪೦-೫೦ ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ.
ಅದೇ ರೀತಿ, ಸಂಜೆ ಆರು ಗಂಟೆವರೆಗೆ ನೇರಳೆ ಮಾರ್ಗದಲ್ಲಿ ಸೋಮವಾರ ೩.೩೫ಲಕ್ಷ ಜನ ಸಂಚರಿಸಿದ್ದು, ಎಂದಿಗಿಂತ ೨೫ ಸಾವಿರ ಹೆಚ್ಚಿನ ಜನರು ಓಡಾಡಿದ್ದಾರೆ.
ಸೋಮವಾರ ರಾತ್ರಿ ೯ ಗಂಟೆವರೆಗೆ ನೇರಳೆ ಮಾರ್ಗದಲ್ಲಿ ೨,೮೯,೧೦೫ ಹಾಗೂ ಹಸಿರು ಮಾರ್ಗದಲ್ಲಿ ೨,೧೮,೨೧೧ ಸೇರಿ ೫,೦೭,೩೧೬ ಜನ ಪ್ರಯಾಣಿಸಿದ್ದಾರೆ. ರೀಚ್೧ಇ ಅಂದರೆ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೆ ೫೪,೪೨೮ ಪ್ರಯಾಣಿಕರು ಸಂಚರಿಸಿದ್ದಾರೆ.
ವಾರಾಂತ್ಯದಲ್ಲಿ ಚಲ್ಲಘಟ್ಟ-ವೈಟ್‌ಫೀಲ್ಡ್ ಮೆಟ್ರೋದಲ್ಲಿ ಮತ್ತಷ್ಟು ಜನರ ಓಡಾಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಿಎಂ ಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.
ಯಾವುದೇ ರೀತಿಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಮಾಡದೇ, ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿಯಿಂದ-ಚಲ್ಲಘಟ್ಟ ಹಾಗೂ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ನಿನ್ನೆ ಪೂರ್ಣ ಪ್ರಮಾಣದಲ್ಲಿ ಜನಸಂಚಾರಕ್ಕೆ ಮುಕ್ತವಾಗಿದೆ.
ಒಟ್ಟಿನಲ್ಲಿ ವೈಟ್ ಫೀಲ್ಡ್, ಬೈಯಪ್ಪನಳ್ಳಿ ಮಾರ್ಗ, ದಿಂದ ಕೆಂಗೇರಿ, ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿದ್ದು,ಚಲ್ಲಘಟ್ಟದಿಂದ- ವೈಟ್ ಫೀಲ್ಡ್ ೩೭ ಸ್ಟೇಷನ್,೪೩.೪೯ ಕಿಲೋ ಮೀಟರ್ ,ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ೧೩ ಕೀ ಮಿ ವಿಸ್ತರಣೆಯಾಗಿದ್ದು,ಕೆಂಗೇರಿಯಿಂದ ಚಲಘಟ್ಟಗೆ ೨.೧೦ ಕಿ ಮೀ ವಿಸ್ತರಣೆಯಾಗಿದೆ.