ಒಂದೇ ದಿನ 20.61 ಲಕ್ಷಕ್ಕೂ ಹೆಚ್ಚು ಪರೀಕ್ಷೆ:ಸೋಂಕಿನ ಪ್ರಮಾಣ ಶೇ.12.59ರಷ್ಟು ಕುಸಿತ

ನವದೆಹಲಿ, ಮೇ 21- ಮಾರಕ ಕೊರೊನಾ ಸೋಂಕು ತಡೆಗೆ ಹರಸಾಹಸ ನಡೆಸುತ್ತಿರುವ ಕೇಂದ್ರ ಸರ್ಕಾರ, ಇಂದು ಒಂದೇ ದಿನ‌ ದಾಖಲೆ ಪ್ರಮಾಣದಲ್ಲಿ 20.61 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದೆ.‌
ಸೋಂಕು ತಗಲುವ ಪ್ರಮಾಣವು ಶೇ.12.59 ಕುಸಿದಿದೆ.‌ಸತತ ಎಂಟನೇ ದಿನವೂ ಹೊಸ ಪ್ರಕರಣಗಳ ಚೇತರಿಕೆ ಪ್ರಮಾಣ ಏರಿಕೆಯಾಗುತ್ತಿದ್ದು, ಇಂದು 3,57,295 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಒದಗಿಸಿದೆ.
ನಿನ್ನೆಯವರೆಗೆ 32,14,47,870 ಕೊರೊನಾ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರ ಜತೆಗೆ 20,61,683 ಮಾದರಿಗಳನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಇದೂ ದಿನವು ಮೂರು ಲಕ್ಷಕ್ಕಿಂತಲೂ ಕಡಿಮೆ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.
ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಅಸ್ಸಾಂ ಟಾಪ್ 10 ರಾಜ್ಯಗಳು ಸೇರಿದಂತೆ 76 ರಾಜ್ಯಗಳಲ್ಲಿ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು 2,59,551 ಹೊಸ ಪ್ರಕರಣಗಳು ದಾಖಲಾಗಿವೆ ತಮಿಳುನಾಡಿನಲ್ಲಿ ದೈನಂದಿನ ಅತಿ ಹೆಚ್ಚು ಹೊಸ ಪ್ರಕರಣಗಳು 35,579 ಪತ್ತೆಯಾಗಿದ್ದರೆ, ಕೇರಳದಲ್ಲಿ 30,491 ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ, ಭಾರತದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 30,27,925ಕ್ಕೆ ಇಳಿದಿದೆ. ಕಳೆದ ಒಂದು ದಿನದಲ್ಲಿ ಒಟ್ಟು ಸಕ್ರಿಯ ಪ್ರಕರಣದಲ್ಲಿ 1,01,953 ಪ್ರಕರಣಗಳು ಕಡಿಮೆಯಾಗಿವೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಸೇರಿ ಎಂಟು ರಾಜ್ಯಗಳಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 69.47 ರಷ್ಟಿದೆ ಎಂದು ಅಂಕಿ ಅಂಶ ನೀಡಿದೆ.

ಇದೇ ವೇಳೆ ಲಸಿಕೆ ನೀಡುತ್ತಿರುವ ವೇಗವನ್ನು ಹೆಚ್ಚಿಸಲಾಗಿದ್ದು, ಇದು ವರೆಗೆ 19 ಕೋಟಿ ಲಸಿಕೆಯನ್ನು ನೀಡಲಾಗಿದೆ.