ಒಂದೇ ದಿನ ೧,೪೦೪ ವಾಹನಗಳ ಜಪ್ತಿ

Morning police checking and seizing the vehical 


ಬೆಂಗಳೂರು,ಮೇ.೧೯-ಕೊರೊನಾ ಲಾಕ್ ಡೌನ್ ಜಾರಿಯ ವೇಳೆ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಿರುವ ಪೊಲೀಸರು ನಿನ್ನೆ ಒಂದೇ ದಿನ ೧,೪೦೪ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ನಿನ್ನೆ ಬೆಳಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ನಡೆದ ಪೊಲೀಸರ ಕಾರ್ಯಚರಣೆಯಲ್ಲಿ ದ್ವಿಚಕ್ರ ವಾಹನ, ಕಾರು, ಆಟೋ ಸೇರಿದಂತೆ ಒಟ್ಟು ೧,೪೦೪ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ವಾಹನಗಳಲ್ಲಿ ೧,೨೭೫ ದ್ವಿಚಕ್ರ ವಾಹನಗಳು, ೬೨ ಆಟೋಗಳು ಮತ್ತು ೬೭ ಕಾರುಗಳು ಸೇರಿವೆ.
ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ೧೨ ಮಂದಿಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.