ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.04 : ತಾಲೂಕಿನ ಆನೆಗೊಂದಿ ಸಮೀಪದ ನವ ಬೃಂದಾವನ ಗಡ್ಡೆಯಲ್ಲಿರುವ ಒಂದು ಬೃಂದಾವನಕ್ಕೆ ಮಂತ್ರಾಲಯ ರಾಯರ ಮಠ ಹಾಗೂ ಉತ್ತರಾದಿ ಮಠದವರು ಜೂ. 5, 6 ಮತ್ತು 7 ರಂದು ಯತಿಗಳ ಆರಾಧನೆಗೆ ಅನುಮತಿ ಕೋರಿದ್ದು, ನವ ಬೃಂದಾವನ ಮತ್ತೆ ವಿವಾದ ಉದ್ಭವ ಗೊಂಡಿದೆ.
ಎರಡು ಮಠಗಳ ನಡುವಿನ ಗೊಂದಲ ಬಗೆಹರಿಸಲು ಹಾಗೂ ನವ ಬೃಂದಾವನ ಗಡ್ಡೆಯಲ್ಲಿ ಶಾಂತಿ ಕಾಪಾಡುವ ಮುಂಜಾಗ್ರತೆಯಿಂದ ಕೊಪ್ಪಳ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಮೇ 30 ರಂದು ಉಭಯ ಮಠಗಳ ಭಕ್ತರ ನಡುವೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಒಮ್ಮತ ಮೂಡದ ಹಿನ್ನಲೆ ನ್ಯಾಯಾಲಯದ ಅನುಮತಿ ಮೇರೆಗೆ ಬೃಂದಾವನ ಗಡ್ಡೆಯಲ್ಲಿ ಪೂಜೆ, ಆರಾಧನೆ ನಡೆಸಬೇಕು. ಒಂದು ವೇಳೆ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 5, 6, 7 ರಂದು ಉತ್ತರಾದಿ ಮಠದವರು ರಘುವರ್ಯ ತೀರ್ಥರ ಆರಾಧನಾ ಮಹೋತ್ಸವ ಆಯೋಜಿಸಲು ನಿರ್ಧರಿಸಿದ್ದರೆ, ರಾಯರ ಮಠದವರು ಇದೇ ದಿನಗಳಂದು ನವ ಬೃಂದಾವನ ಗಡ್ಡೆಯಲ್ಲಿ ಶ್ರೀ ಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪೂಜೆಗೆ ನ್ಯಾಯಾಲಯದ ಅನುಮತಿ ಪಡೆಯಲು ಕೋರ್ಟ್ ಮೆಟ್ಟಿಲೆರಲಿದ್ದು, ತೀರ್ಪಿಗಾಗಿ ಕಾಯುವಂತಾಗಿದೆ.