ಒಂದೇ ದಿನದಲ್ಲಿ 5700 ಸಸಿಗಳು ನೆಡುವಿಕೆ

ಭಾಲ್ಕಿ:ಜು.24: ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಅರಣ್ಯ ಇಲಾಖೆಯಿಂದ ಜು.24 ರಂದು ನಡೆಯುವ ವನಮಹೋತ್ಸವ 2023 ರ ವೇದಿಕೆಯ ಪೂರ್ವ ಸಿದ್ಧತೆ ಡಿಸಿಎಫ್ ವಾನತಿ ಎಮ್.ಎಮ್.ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು,ಅರಣ್ಯ ಇಲಾಖೆಯಿಂದ ಜು.24 ರಂದು ನಡೆಯುವ ವನಮಹೋತ್ಸವ 2023 ಮತ್ತು

ಅರಣ್ಯೀಕರಣ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ.ಕೇಂದ್ರ ಸಚಿವ ಭಗವಂತ ಖೂಬಾ,ಪೌರಾಡಳಿತ ಸಚಿವ ರಹೀಂ ಖಾನ ಸೇರಿದಂತೆ ಜಿಲ್ಲೆಯ ಶಾಸಕರು,ವಿಧಾನ ಪರಿಷತ್ ಸದಸ್ಯರು,ಡಿಸಿ,ಸಿಇಓ,ಎಸ್‍ಪಿ ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು,ವಿವಿಧ ಶಾಲಾ ಕಾಲೇಜಿನ ಅಂದಾಜು 5000 ಮಕ್ಕಳು ಭಾಗವಹಿಸಲಿದ್ದಾರೆ.ಪ್ರಸ್ತುತ ಸುರಿಯುತ್ತಿರುವ ಮಳೆಯ ಭಯದಿಂದ ವೇದಿಕೆ ಕಾರ್ಯಕ್ರಮದ ಸುರಕ್ಷತೆಗಾಗಿ ಜಲ ನಿರೋಧಕ ವೇದಿಕೆ ನಿರ್ಮಿಸಲಾಗಿದೆ.ವಿದ್ಯಾರ್ಥಿಗಳಿಗೆ ಕರೆತರಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.ಅರಣ್ಯ ಸಚಿವರ ನಿರ್ದೇಶನದಂತೆ ಪಟ್ಟಣದ ಎಲ್ಲ ಕಡೆ ನಾಳೆ ಒಂದೇ ದಿನದಲ್ಲಿ ವಿವಿಧ ನಮೂನೆಯ 5700 ಸಸಿ ನೆಡಲಾಗುವುದು.ಅರಣ್ಯ ಇಲಾಖೆ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಪ್ರೇಮಸಿಂಗ ,ಡಿಸಿಎಫ್ ಎ.ಬಿ.ಪಾಟೀಲ್,ಎಸಿಎಫ್ ಎಮ್‍ಡಿ ಮುಜಿಬೋದಿನ್ ಸೇರಿದಂತೆ ಎಲ್ಲ ವಲಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.