ಒಂದೇ ದಿನದಲ್ಲಿ 5 ಸಾವಿರ ಮಂದಿಗೆ ಸೋಂಕು

ನವದೆಹಲಿ,ಸೆ.೨೨- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಏರುಮುಖದಲ್ಲಿದೆ. ಮೂರ್ನಾಲ್ಕು ದಿನಗಳ ನಂತರ ಸೋಂಕು ಸಂಖ್ಯೆ ಮತ್ತೊಮ್ಮೆ ಐದು ಸಾವಿರ ಗಡಿ ದಾಟಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ನಿತ್ಯದ ಚೇತರಿಕೆ ಸಂಖ್ಯೆಗಿಂತ ಸೋಂಕು ಸಂಖ್ಯೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ಈ ಅವಧಿಯಲ್ಲಿ ೫,೪೪೩ ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ಸೋಂಕಿನಿಂದ ಬಿಡುಗಡೆಯಾದರ ಒಟ್ಟು ಸಂಖ್ಯೆ ೫,೨೯೧ ಮಂದಿಯಲ್ಲಿ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.
ಹೊಸದಾಗಿ ಚೇತರಿಸಿಕೊಂಡ ಸಂಖ್ಯೆ ಸೇರಿಂದತೆ ಇಲ್ಲಿಯ ತನಕ ೪,೩೯,೭೮,೨೯೧ ಮಂದಿ ಇದುವರೆಗೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸೋಂಕು ಸಂಖ್ಯೆ ನಿತ್ಯ ಏರಿಳಿತ ಹಿನ್ನೆಲೆಯಲ್ಲಿ ಒಟ್ಟಾರೆ ಚೇತರಿಕೆ ಸಂಖ್ಯೆ ಶೇ.೯೮.೭೧ ರಷ್ಟು ಇದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ. ದೇಶದಲ್ಲಿ ಹೊಸದಾಗಿ ೧೫,೮೫,೩೪೩ ಡೋಸ್ ಲಸಿಕೆ ನೀಡಲಾಗಿದ್ದು ಇದುವರೆಗೂ ಒಟ್ಟಾರೆ ೨೧೭,೧೧,೩೬,೯೩೪ ಡೋಸ್ ಲಸಿಕೆ ನೀಡಲಾಗಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸೋಂಕಿನಿಂದ ಇಲ್ಲಿಯವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ ೫,೨೮,೪೨೯ ಕ್ಕೆ ಹೆಚ್ಚಾಗಿದೆ. ಜೊತೆಗೆ ದಿನದ ಪಾಸಿಟಿವಿಟಿ ಪ್ರಮಾಣ ಶೇ. ೧.೬೧ ರಷ್ಟು ಇದ್ದು ಬಾರದ ಸರಾಸರಿ ಪ್ರಮಾಣ ಶೇ.೧.೭೩ ರಷ್ಟು ಇದೆ. ಅಲ್ಲದೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೧೦ ರಷ್ಡು ಇದೆ ಸಚಿವಾಲಯ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.
ಸೋಂಕು ಏರಿಳಿತ ಹಿನ್ನೆಲೆಯಲ್ಲಿ ಒಟ್ಟಯ ಸಕ್ರಿಯ ಪ್ರಕರಣಗಳ ಒಟ್ಟಾರೆ ಸಂಖ್ಯೆ ೪೬,೩೪೨ ಕ್ಕೆ ಹೆಚ್ಚಳವಾಗಿದೆ.ಈ ಸಂಖ್ಯೆ ಕಳೆದ ಎರಡು ದಿನಗಳಿಂದ ಏರುಮುಖವಾಗಿದೆ.
ದೇಶದಲ್ಲಿ ಕಳೆದ ೨೪ ಗಂಟೆಯ ಅವಧಿಯಲ್ಲಿ ಹೊಸದಾಗಿ ೩,೩೯,೦೬೨ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ಒಟ್ಟಾರೆ ೮೯, ೨೭ ಕೋಟಿ ಜನರಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.