ಒಂದೇ ದಿನದಲ್ಲಿ ೨೦ಸಾವಿರ ಮಂದಿಗೆ ಸೋಂಕು

ನವದೆಹಲಿ,ಆ.೫- ದೇಶದಲ್ಲಿ ವಾರದ ಬಳಿಕ ಕೊರೊನಾ ಸೋಂಕು ಸಂಖ್ಯೆ ೨೦ ಸಾವಿರ ಗಡಿ ದಾಟಿದ್ದು ಸೋಂಕಿಗಿಂತ ತುಸು ಚೇತರಿಕೆ ಹೆಚ್ಚಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೦,೫೫೧ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೨೧,೫೯೫ ಮಂದಿ ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ೪.೩೯ ಕೋಟಿಗೆ ಹೆಚ್ಚಳವಾಗಿದೆ. ಜೊತೆಗೆ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೪,೪೫,೬೨೪ ಮಂದಿಗೆ ಏರಿಕೆಯಾಗಿದೆ.
ಹೊಸದಾಗಿ ೩೬,೯೫,೮೩೫ ಡೋಸ್ ಲಸಿಕೆ ನೀಡಲಾಗಿದ್ದು ಒಟ್ಟಾರೆಯಾಗಿ ೨೦೫,೫೯ ಕೋಟಿ ಡೋಸ್‌ಗೆ ಏರಿಕೆಯಾಗಿದ. ಇದರಲ್ಲಿ ೯೩,೪೬ ಕೋಟಿ ಡೋಸ್ ಎರಡನೇ ಡೋಸ್ ಮತ್ತು ೧೦,೦೯ ಕೋಟಿ ಹೆಚ್ಚುವರಿ ಡೋಸ್ ಲಸಿಕೆ ನೀಡಲಾಗಿದೆ. ಇನ್ನುಳಿದ ಡೋಸ್ ಮೊದಲ ಡೋಸ್ ಲಸಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ.೫.೧೪ ರಷ್ಟು ಏರಿಕೆಯಾಗಿದ್ದ ವಾರದ ಸರಾಸರಿ ಪ್ರಮಾಣ ಶೇ.೪.೬೪ ರಷ್ಟು ಇದೆ.ಅಲ್ಲದೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೧ ರಷ್ಟು ಇದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪,೦೦,೧೧೦ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ಒಟ್ಟು ಸೋಂಕು ಸಂಖ್ಯೆ ೮೭,೭೧ ಕೋಟಿ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.