ಒಂದೇ ಖಾತೆ, ಸೇವೆ ಹಲವಾರು: ವಿ. ಎಲ್. ಚಿತಕೋಟೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜ.11: ತಾಲ್ಲೂಕಿನ ಕರೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ತಿಳಿಸುವ  ‘ಅಂಚೆ ಜನ ಸಂಪರ್ಕ ಅಭಿಯಾನ’ ಕಾರ್ಯಕ್ರಮ ನಡೆಯಿತು.
ಅಂಚೆ ಇಲಾಖೆಯಲ್ಲಿ ಒಂದು ಖಾತೆ ತೆರೆಯುವ ಮೂಲಕ ಹುಟ್ಟಿನಿಂದ ಮುಪ್ಪಿನ ತನಕ ಹಲವಾರು ಸೇವೆಗಳನ್ನು ಪಡೆಯಬಹುದು, ವಿವಿಧ ಉಳಿತಾಯ ಖಾತೆಗಳು, ಬ್ಯಾಂಕಿಂಗ್ ಸೇವೆ, ವಿಮಾ ಯೋಜನೆ, ಅಂಚೆಚೀಟಿ ಸಂಗ್ರಹ ಮಹತ್ವ, ಗೋಲ್ಡ್ ಬಾಂಡ್ ಖರೀದಿ, ಮಕ್ಕಳಿಗಾಗಿ ಪತ್ರ ಲೇಖನ ಸ್ಪರ್ಧೆ, ‘ದೀನ್ ದಯಾಳ್’  ಸ್ಪರ್ಶ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ಮುಂತಾದ ಪ್ರಯೋಜನಗಳನ್ನು ಪಡೆಯಬಹುದು’ ಎಂದು ಬಳ್ಳಾರಿ ಜಿಲ್ಲಾ ವಿಭಾಗೀಯ ಅಂಚೆ ಅಧೀಕ್ಷಕ ವಿ ಎಲ್ ಚಿತಕೋಟೆ ತಿಳಿಸಿದರು ಎಂದು ತಿಳಿಸಿದರು.
ಸಿರುಗುಪ್ಪ ಉಪ ವಿಭಾಗದ ಅಂಚೆ ನಿರೀಕ್ಷಕ ಎನ್ ಗೋಪಿ ಸಾಗರ್ ಅಂಚೆ ಕಚೇರಿಯ ಐ.ಪಿ.ಪಿ.ಬಿ ಖಾತೆಯ ಪ್ರಯೋಜನಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿರುಗುಪ್ಪ ಅಂಚೆ ಮೇಲ್ವಿಚಾರಕ ಕೆ ನಾಗರಾಜ, ಕರೂರು ಅಂಚೆ ಪಾಲಕಿ ಧನಲಕ್ಷ್ಮಿ ಕುಲಕರ್ಣಿ ಹಾಗೂ ಕರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಇದ್ದರು.

One attachment • Scanned by Gmail