ಒಂದೇ ಕುಟುಂಬದ ನಾಲ್ವರ ಜೀವಂತ ಸುಟ್ಟು ಹಾಕಿದ ಅಪರಾಧಿಗೆ ಜೀವಾವಧಿ ಶಿಕ್ಷೆ, 4 ಲಕ್ಷ ದಂಡ

ಕಲಬುರಗಿ,ಫೆ.27-ಎಂ.ಎಸ್.ಕೆ. ಮಿಲ್ ಪ್ರದೇಶದ ಎಕ್ಬಾಲ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಮಲಗಿದ ಒಂದೇ ಕುಟುಂಬದ ನಾಲ್ವರನ್ನು ಜೀವಂತವಾಗಿ ಸುಟ್ಟುಹಾಕಿ ಹತ್ಯೆ ನಡೆಸಿದ ಅಪರಾಧಿಗೆ ಇಲ್ಲಿನ 1ನೇ ಅಪಾರ ಮತ್ತು ಜಿಲ್ಲಾ ಸತ್ರ ನ್ಯಾಯಲಯ ಜೀವಾವಧಿ ಶಿಕ್ಷ ಮತ್ತು 4 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಇಕ್ಬಾಲ್ ಕಾಲೋನಿ ನಿವಾಸಿಯಾಗಿರುವ ಮುಸ್ತಫಾ ಸುಲ್ತಾನ್ ಮಿರ್ಜಾ ಸಲೀಮ್ (25) ಶಿಕ್ಷೆಗೆ ಒಳಗಾದ ಅಪರಾಧಿ. 04/07/2018 ರಂದು ಇಕ್ಬಾಲ್ ಕಾಲೋನಿಯ ನಿವಾಸಿಯಾಗಿದ್ದ ಸೈಯದ್ ಅಕ್ಬರ್, ಶಹನಾಜ್ ಬೇಗಂ ಮತ್ತು ಇಬ್ಬರು ಮಕ್ಕಳಾದ ಸೈಯದ್ ಯಾಸೀನ್ ಹಾಗೂ ಸೈಯದಾ ಸಾನಿಯಾ ಬೇಗಂ ಅವರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು.
ಮಧ್ಯರಾತ್ರಿ ನಾಲ್ವರು ಮನೆಯಲ್ಲಿ ಮಲಗಿರುವ ವೇಳೆ ಪೆಟ್ರೋಲ್ ಹಾಕಿ ಹೊರಗಿನಿಂದ ಬಾಗಿಲಿಗೆ ಕೊಂಡಿಯನ್ನು ಜಡಿದು ಬೆಂಕಿ ಹಚ್ಚಿದನ್ನು. ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದರು. ಈ ಕುರಿತು ರಾಘವೇಂದ್ರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರಾ ಜಿಲ್ಲಾ ಮತ್ತು ಸತ್ರ ನ್ಯಾಲಯದ ನ್ಯಾಯಾಧೀಶರಾದ ಮೋಹನ್ ಬಾಡಗಂಡಿ ಸಾಕ್ಷಿ ಆಧಾರವಾಗಿ ಇಟ್ಟುಕೊಂಡು ಅಪರಾಧಿ ಮುಸ್ತಫಾಗೆ ಜೀವಿತ ಅವಧಿಯವರೆಗೆ ಶಿಕ್ಷೆ ಹಾಗೂ ನಾಲ್ಕು ಲಕ್ಷ ದಂಡ ವಿಧಿಸಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ದಂಡ ಪಾವತಿಸಲು ವಿಫಲವಾಗಿದಲ್ಲಿ 2 ವರ್ಷ ಕಠಿಣ ಶಿಕ್ಷೆ ವಿಧಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಎಸ್.ಆರ್ ನರಸಿಂಹ ಅವರು ನ್ಯಾಯಲಯದಲ್ಲಿ ಸರಕಾರದ ಪರವಾಗಿ ವಾದ ಮಂಡಿಸಿದರು.