ಒಂದೇ ಕುಟುಂಬದ ನಾಲ್ವರು ಶಂಕಾಸ್ಪದ ಸಾವು

ರಾಯ್​ಪುರ (ಛತ್ತೀಸ್‌ಗಢ),ಮೇ 14- ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಜಿಲ್ಲೆಯ ಟಿಲ್ಡಾ ಪ್ರದೇಶದಲ್ಲಿ ನಡೆದಿದೆ.
ಮನೆಗೆ ಹೊರಗೆ ಚಿಲಕ ಹಾಕಿದ್ದು, ಒಳಗೆ ದೀಪಗಳು ಉರಿಯುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ಉದ್ಯಮಿ ಪಂಕಜ್ ಜೈನ್, ಅವರ ಪತ್ನಿ ರುಚಿ ಮತ್ತು ಇಬ್ಬರು ಪುತ್ರರಾದ ಬಿಟ್ಟು ಮತ್ತು ಭಯು ಎಂದು ಗುರುತಿಸಲಾಗಿದೆ. ಪಂಕಜ್ ಜೈನ್ ಶವ ನೆಲದ ಮೇಲೆ ಬಿದ್ದಿದ್ದು, ಆತನ ಶವದ ಪಕ್ಕದಲ್ಲಿ ರಾಡ್​ವೊಂದು ಕೂಡ ಪತ್ತೆಯಾಗಿದೆ.
ಇತ್ತ, ಆತನ ಪತ್ನಿಯ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದು, ಕೊಠಡಿಯೊಂದರಲ್ಲಿ ಇಬ್ಬರು ಮಕ್ಕಳ ಮೃತ ದೇಹಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇದೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸುತ್ತಿದ್ದು, ಮತ್ತು ಸ್ಥಳೀಯರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ಧಾರೆ.