ಒಂದೇ ಕಾರ್ಯಕ್ರಮ 2 ಬಾರಿ ಉದ್ಘಾಟನೆ

ಕೋಲಾರ, ಜ. ೮- ಒಂದೇ ಕಾರ್ಯಕ್ರಮವನ್ನು ಎರಡು ಬಾರಿ ಉದ್ಘಾಟನೆ ಮಾಡುವ ಮೂಲಕ, ಸಂಸದ ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟವಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ ಅಥವಾ ಅಧಿಕಾರಿಗಳೇನಾದರೂ ಜನಪ್ರತಿನಿಧಿಗಳ ಓಲೈಕೆಗೆ ಮುಂದಾಗಿದ್ದಾರಾ ಎನ್ನುವಂತಹ ಪ್ರಶ್ನೆಗಳು ಮೂಡಿದೆ.


ಹೌದು, ಇಂದು ಕೋಲಾರದ ಎಸ್.ಎನ್.ಆರ್. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಡ್ರೈ ರನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅದರಂತೆ ಮೊದಲಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಡ್ರೈ ರನ್ ಕಾರ್ಯಕ್ರಮವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು. ಅದರಂತೆ ಹತ್ತು ಹದಿನೈದು ನಿಮಿಷಗಳ ನಂತರ ಬಂದಂತಹ ಸಂಸದ ಎಸ್.ಮುನಿಸ್ವಾಮಿ ಅವರು, ಮತ್ತೆ ಟೇಪ್ ಕತ್ತರಿಸುವ ಮೂಲಕ ಎರಡನೇ ಬಾರಿಗೆ ಉದ್ಘಾಟನೆ ಮಾಡಿದರು.
ಈ ಮೂಲಕ ಒಂದೇ ಕಾರ್ಯಕ್ರಮಕ್ಕೆ ಎರಡೆರಡು ಬಾರಿ ಟೇಪ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.
ಇದರಿಂದ ಸಂಸದ ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ ಅಥವಾ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಓಲೈಕೆ ಮಾಡಲು ಮುಂದಾದರಾ ಅನ್ನೋ ಗೊಂದಲಕ್ಕೆ ಕಾರಣವಾಯಿತು.