
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.18- ಕಳೆದ 9 ವರ್ಷಗಳಲ್ಲಿ ಒಂದೇ ಒಂದು ಜಲಾಶಯ ನಿರ್ಮಿಸದ ಬಿಜೆಪಿ ಸರ್ಕಾರ ತಾನು ರೈತರ ಪರ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ 503 ಜಲಾಶಯ ನಿರ್ಮಾಣ ಮಾಡಿತ್ತು. ಕಳೆದ 2014 ರಿಂದ ಒಂದೇ ಒಂದು ಜಲಾಶಯ ಮಾಡಿಲ್ಲ ಈ ಬಿಜೆಪಿ ಸರ್ಕಾರ ಎಂದರು. ಕೊಟ್ಟ ಭರವಶೆ ಈಡೇರಿಸುವುದೆಂದರೆ ಅದು ಕಾಂಗ್ರೆಸ್ ಮಾತ್ರ. ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ 165 ಆಶ್ವಾಸನೆಗಳನ್ನ ಈಡೇರಿಸಿದ್ದೇವೆ.ಬಿಜೆಪಿ 600 ಆಶ್ವಾಸನೆ ಕೊಟ್ಟಿತ್ತು, ಯಾವ ಆಶ್ವಾಸನೆ ಈಡೇರಿಸಿಲ್ಲ ಎಂದು ಆರೋಪಿಸಿದರು. ಇಡೀ ದೇಶ ಕಂಡ ಅತ್ಯಂತ ವಚನ ಭ್ರಷ್ಟ ವ್ಯಕ್ತಿ ಅಂದ್ರೆ ಅದು ಪ್ರಧಾನಿ ಮೋದಿ, ಯಡಿಯೂರಪ್ಪ, ಹಾಗೂ ಮುಖ್ಯ ಮಂತ್ರಿ ಬೊಮ್ಮಾಯಿ.
ನಾ ಕಾವೂಂಗಾ ನಾ ಕಾನೇ ದೂಂಗಾ ಅಂತಾ ಹೇಳುವ ಪ್ರಧಾನಿಗಳು ಯಾಕೆ ಪಾರದರ್ಶಕವಾಗಿ ಆಡಳಿತ ಮಾಡ್ತಿಲ್ಲ ಎಂದರು.
ವಿವಿದ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಕೆಪಿಎಸ್ ಸಿ ಹಗರಣವನ್ನ ಕೂಡಲೇ ತನಿಖೆಗೆ ಒಳ ಪಡಿಸಬೇಕು. ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಪರಿಣಾಮವೇ ಈ ಬಾರಿ ಕಾಂಗ್ರೆಸ್ ಗೆ ಜನ ಮತ ನೀಡಲಿದ್ದಾರೆಂದರು.
ಉಚಿತವಾಗಿ 200 ಯುನಿಟ್ ವಿದ್ಯುತ್ ಹಾಗೂ ಪ್ರತಿ ಮನೆಯ ಗೃಹಿಣಿಗೆ 2000 ಪ್ರೋತ್ಸಾಹ ಧನ ನೀಡುತ್ತೇವೆ. ಕೊಟ್ಟ ವಾಗ್ದಾನ ಈಡೇರಿಸಲು ನಾವು ಬದ್ದರಾಗಿದ್ದೇವೆಂದು.
ವಿಧಾನ ಪರಿಷತ್ ಸದಸ್ಯ ಸಿಪಿ.ಯೋಗೇಶ್ವರ ಅವರ ಆಡಿಯೋ ವೈರಲ್ ಆಗಿದ್ದನ್ನು ನೋಡಿದ್ರೆ. ಬಿಜೆಪಿ ರಾಷ್ಟ್ರೀಯ ನಾಯಕರು ರೌಡಿ ಮೋರ್ಚಾ ಅಂತಾ ಅವರೇ ಹೇಳಿದ್ದಾರೆ.
ಅದೇ ಪಕ್ಷದ ಶಾಸಕರು ಈ ರೀತಿ ಹೇಳ್ತಿರೋದನ್ನ ನೋಡಿದ್ರೆ ಅರ್ಥ ಮಾಡ್ಕೋಳಿ ಎಂದ ಅವರು. ಸೋಲಿನ ಭಯಕ್ಕೆ ಚುನಾವಣೆಗೂ ಮೊದಲೇ ಆಪರೇಷನ್ ಕಮಲ ಮಾಡೋದಾಗಿ ಬಿಜೆಪಿ ನಾಯಕರು ಹೇಳಿದ್ದಾರೆಂದರು.
ಸುದ್ದಿಗೋಷ್ಟಿಯಲ್ಲಿ ಕೆ.ತಾಯಪ್ಪ, ಲೋಕೇಶ, ವಿಲ್ಸನ್, ಸುರೇಶ್, ರವಿನೆಟ್ಟಕಲ್ಲಪ್ಪ ಮೊದಲಾದವರು ಇದ್ದರು.