ಒಂದೆಲಗ ಎಲೆಯ ಬೇಳೆಸಾರು

ಬೇಕಾಗುವ ಸಾಮಾಗ್ರಿಗಳು
ತೊಗರಿ ಬೇಳೆ
ಒಂದೆಲಗ ಎಲೆಗಳು
ಶುಂಠಿ
ಉಪ್ಪು,ರುಚಿಗೆ ತಕ್ಕಷ್ಟು
ಅರಶಿನ ಪುಡಿ
೩ ಹಸಿ ಮೆಣಸಿನಕಾಯಿ
ತುಪ್ಪ

ಒಗ್ಗರಣೆಗಾಗಿ
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವಿನ ಎಲೆಗಳು
ಒಣ ಮೆಣಸಿನಕಾಯಿ
ಇಂಗಿನ ಪುಡಿ
ಲಿಂಬೆ ರಸ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಪ್ರೆಷರ್ ಕುಕ್ಕರ್ ಗೆ ೧೦ ನಿಮಿಷ ನೆನೆಸಿಟ್ಟ ತೊಗರಿಬೇಳೆ,ಒಂದೆಲಗ ಎಲೆಗಳು,ಹೆಚ್ಚಿದ ಶುಂಠಿ,ಉಪ್ಪು,ಅರಸಿನ ಪುಡಿ,ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ತುಪ್ಪ ಹಾಕಿ ೩ ಕಪ್ ನೀರನ್ನು ಹಾಕಿ ಮಧ್ಯಮ ಉರಿಯಲ್ಲಿ ೪ ವಿಷಲ್ ಬರುವ ತನಕ ಬೇಯಿಸಿ.
ಬಾಣಲೆಯಲ್ಲಿ ೨ ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ.ಸಾಸಿವೆ ಸಿಡಿದ ಮೇಲೆ ಜೀರಿಗೆ,ಕರಿಬೇವಿನ ಎಲೆ,ತುಂಡು ಮಾಡಿದ ಒಣ ಮೆಣಸಿನಕಾಯಿ ಮತ್ತು ಇಂಗಿನ ಪುಡಿಯನ್ನು ಹಾಕಿ ಹುರಿಯಿರಿ.

ಈಗ ಬಾಣಲೆಗೆ ಕುಕ್ಕರ್ ನಲ್ಲಿ ಬೇಯಿಸಿದ ಬೇಳೆ ಮತ್ತು ಎಳೆಗಳ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಕಿ ೨ ನಿಮಿಷ ಕುದಿಸಿ.

ಕೊನೆಯಲ್ಲಿ ಉರಿಯನ್ನು ನಿಲ್ಲಿಸಿದ ಮೇಲೆ ಲಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿದರೆ ರುಚಿಯಾದ ಒಂದೆಲಗ ಎಳೆಯ ಬೇಳೆ ಸಾರು ರೆಡಿ.ಇದನ್ನು ಅನ್ನದ ಜೊತೆ ತಿನ್ನಲು ತುಂಬಾ ರುಚಿ