ಒಂದೂವರೆ ಕ್ಷಿಂಟಾಲ್ ಗಾಂಜಾ ವಶ: ಮೂವರು ಪರಾರಿ


ಮಂಜೇಶ್ವರ, ಮಾ.೨೭- ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ಮತ್ತು ೫೦ ಗ್ರಾಂ ಮಾದಕ ವಸ್ತುವನ್ನು ಮಾ.೨೬ ರ ಶುಕ್ರವಾರ ಅಬಕಾರಿ ದಳದ ಸಿಬಂದಿ ವಶಪಡಿಸಿಕೊಂಡಿದ್ದು, ಮೂವರು ಪರಾರಿಯಾಗಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಮಜೀರ್ ಪಳ್ಳ ಕೊಳ್ಯೂ ರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದು, ಓರ್ವನನ್ನು ಬೆನ್ನಟ್ಟಿ ಹಿಡಿದರೂ ಇತರ ಮೂವರು ಪರಾರಿಯಾದರು. ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಮತ್ತು ಎಂ . ಡಿ ಎಂ . ಎ ಮಾದಕ ವಸ್ತು ಪತ್ತೆಯಾಗಿದೆ.