ಒಂದು ಸಾವಿರ ಮುಖ ಬೆಲೆ ನೋಟು ಮರು ಪರಿಚಯ ಇಲ್ಲ

ಮುಂಬೈ,ಮೇ. ೨೩- ದೇಶದಲ್ಲಿ ೨ ಸಾವಿರ ಮುಖಬೆಲೆಯ ಗರಿಷ್ಠ ನೋಟು ಚಲಾವಣೆ ಹಿಂಪಡೆದ ಹಿನ್ನೆಲೆಯಲ್ಲಿ ಮತ್ತೆ ೧ ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಪ್ರಸ್ತಾಪ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿ ಕಾಂತ ದಾಸ್ ಹೇಳಿದ್ದಾರೆ.

ಹೆಚ್ಚಿನ ಮೌಲ್ಯದ ನೋಟು ಚಲಾವಣೆ ಹಿಂತೆಗೆದುಕೊಳ್ಳುವ ನಿರ್ಧಾರ ಆರ್‌ಬಿಐ ನೀತಿಯ ಭಾಗವಾಗಿದೆ. ೨೦೧೬ ರ ನೋಟು ಅಮಾನ್ಯೀಕರಣದ ನಂತರ ೧ ಸಾವಿರ ಬೆಲೆಯ ನೋಟು ಮರು ಪರಿಚಯ ಮಾಡುವ ಉದ್ದೇಶ ಇಲ್ಲ ಸ್ಪಷ್ಟಪಡಿಸಿದ್ದಾರೆ.

೨,೦೦೦ ರೂಪಾಯಿ ಬೆಲೆಯ ನೋಟು ಹಿಂಪಡೆದ ನಿರ್ಧಾರ ಆರ್ಥಿಕತೆಯ ಮೇಲೆ “ಅತ್ಯಂತ ಕನಿಷ್ಠ ಪರಿಣಾಮ” ಬೀರುತ್ತದೆ ಎಂದು ಹೇಳಿದ ಅವರು ಚಲಾವಣೆಯಲ್ಲಿರುವ ನೋಟುಗಳಲ್ಲಿ ಕೇವಲ ಶೇ. ೧೦ ಕ್ಕಿಂತ ಹೆಚ್ಚು ಮತ್ತು ವಹಿವಾಟುಗಳಲ್ಲಿ ಅವುಗಳನ್ನು ವ್ಯಾಪಕವಾಗಿ ಬಳಸಲಾಗಿಲ್ಲ ಎಂದಿದ್ದಾರೆ.

“ಭಾರತೀಯ ಕರೆನ್ಸಿ ನಿರ್ವಹಣಾ ವ್ಯವಸ್ಥೆ ತುಂಬಾ ದೃಢವಾಗಿದೆ. ಡಾಲರ್ ವಿರುದ್ಧ ನಮ್ಮ ವಿನಿಮಯ ದರ ಬಲಿಷ್ಠವಾಗಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯ ನಗದು ಠೇವಣಿ ನಿಯಮ ಅನುಸರಿಸಬೇಕು ಮತ್ತು ಠೇವಣಿ ನಿರ್ಣಯಿಸುವುದು ಇತರ ಏಜೆನ್ಸಿಗಳಿಗೆ ಬಿಟ್ಟದ್ದು ಎಂದು ಹೇಳಿದ ಅವರು ಬೇಡಿಕೆಯ ಟ್ರೆಂಡ್‌ಗಳ ಆಧಾರದ ಮೇಲೆ ಹೆಚ್ಚಿನ ಬ್ಯಾಂಕ್‌ಗಳು ತಮ್ಮ ಎಟಿಎಂಗಳನ್ನು ಮಾರ್ಪಡಿಸಿವೆ ಮತ್ತು ೨,೦೦೦ ರೂಪಾಯಿಗಳ ನೋಟುಗಳನ್ನು ಹೆಚ್ಚು ನೀಡುತ್ತಿಲ್ಲ ಹೀಗಾಗಿ ಹಿಂಪಡೆಯಲಾಗಿದೆ ಎಂದಿದ್ದಾರೆ.

ಬ್ಯಾಂಕ್‌ಗಳು ಮತ್ತು ಆರ್‌ಬಿಐನಲ್ಲಿ ಲಭ್ಯವಿರುವ ಇತರ ಮುಖಬೆಲೆಯ ನೋಟುಗಳ “ಸಾಕಷ್ಟು ಹೆಚ್ಚು” ದಾಸ್ತಾನು ಇದೆ. ೨,೦೦೦ ರೂ ನೋಟುಗಳ ಸಂಗ್ರಹವನ್ನು ಮರುಪೂರ್ಣ ಮಾಡಲು ಬಳಸಬಹುದು ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ, ವ್ಯವಸ್ಥೆಯಲ್ಲಿನ ದ್ರವ್ಯತೆಗೆ ಸಂಬಂಧಿಸಿದಂತೆ ಆರ್‌ಬಿಐ ವ್ಯವಸ್ಥೆಯಲ್ಲಿನ ದ್ರವ್ಯತೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.