ಒಂದು ಸರಳ ಪ್ರೇಮಕಥೆ ಪೋಸ್ಟರ್  ಬಿಡುಗಡೆ

“ರಾಧಾಕೃಷ್ಣ” ಧಾರಾವಾಹಿಯ ನಟಿ ಮಲ್ಲಿಕಾಸಿಂಗ್ ಕನ್ನಡಕ್ಕೆ ಪ್ರವೇಶಿಸಿದ್ದಾರೆ. ಅದು “ಒಂದು ಸರಳ ಪ್ರೇಮಕಥೆ “ಚಿತ್ರದ ಮೂಲಕ. ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಅವರೊಂದಿಗೆ ಮಲ್ಲಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಪೋಸ್ಟರ್ ಬಿಡುಗಡೆ ಬಳಿಕ ಮಾತಿಗಿಳಿದ ನಿರ್ದೇಶಕ ಸಿಂಪಲ್ ಸುನಿ,“ಸಿಂಪಲ್ ಆಗಿ ಒಂದ್ ಒಂದ್ ಲವ್ ಸ್ಟೋರಿ”  ಚಿತ್ರ ಬಂದು ಹತ್ತು ವರ್ಷ ಆಗಿದೆ. ಆ ಚಿತ್ರಕ್ಕೆ ಇಟ್ಟ ಹೆಸರನ್ನು ಇದೀಗ ಸರಳ ಪ್ರೇಮಕಥೆ ಚಿತ್ರಕ್ಕೆ ಇಡಲಾಗಿದೆ. ಶೇ.50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.ಬೆಂಗಳೂರು ,ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಜೇಶ್ ನಟರಂಗ,ಅರುಣ ಬಾಲರಾಜ್ ಸೇರಿದಂತೆ ದೊಡ್ಡ ಬಳಗವಿದೆ ಎಂದರು.

ವಿನಯ್ ರಾಜ್‍ಕುಮಾರ್ ಮಾತನಾಡಿ, ರೋಮಾಂಟಿಕ್ ಕಾಮಿಡಿ ಚಿತ್ರ..ಅತಿಶಯ್‍ಎನ್ನುವ ಪಾತ್ರ. ಭರವಸೆಯ ಸಂಗೀತ ನಿರ್ದೇಶಕ.ಆತನ ಸುತ್ತ ಸಂಗೀತ ಇರಬೇಕು. ಜೊತೆಗೆ ಹುಡುಗಿಯ ಹುಡುಕಾಟ ಇರುತ್ತದೆ ಅದೇ ಈ ಸಿನಿಮಾ ಮಾಹಿತಿ ನೀಡಿದರು

ನಾಯಕಿ ಮಲ್ಲಿಕಾ ಸಿಂಗ್, ಮೊದಲ ಕನ್ನಡ ಸಿನಿಮಾ ಒಳ್ಳೆಯ ಪಾತ್ರ ಸಿಕ್ಕಿದೆ ಎಂದರೆ ಮತ್ತೊಬ್ಬ ನಟಿ ಸ್ಚಾತಿಷ್ಠ, ಮೊದಲ ಸಿನಿಮಾ ಜರ್ನಲಿಸ್ಟ್ ಪಾತ್ರ ಕಥೆ ಇಷ್ಟವಾಯಿತು ಎಂದರು.

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಗೆದ್ದ ನಿರ್ದೇಶಕರ ಜೊತೆ ಮೊದಲ ಸಿನಿಮಾ.ಸುನಿ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಈಡೇರಿದೆ ಎಂದು ಖುಷಿ ಹಂಚಿಕೊಂಡರು.

ಚಿತ್ರಕ್ಕೆ ಕಥೆ ಬರೆದಿರುವ ಎಂ.ಎಲ್ ಪ್ರಸನ್ನ, ಕಥೆಯ ಹಿಂದೆ ಆಸಕ್ತಿಕರ ಸಂಗತಿ ಇದೆ. ಪುನೀತ್ ಇಷ್ಟಪಟ್ಟಿದ್ದ ಕಥೆ ಅವರಿಗೆ ಆಗಬೇಕಾಗಿತ್ತು ಇದೀಗ ವಿನಯ್ ಮಾಡುತ್ತಿದ್ದಾರೆ ಎಂದರು. ಮೈಸೂರು ರಮೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಕಾರ್ತಿಕ್ ಶರ್ಮಾ,  ಸಭಾ ಕುಮಾರ್ ಚಿತ್ರಕ್ಕೆ ಛಾಯಾಗ್ರಾಹಕರು