ಒಂದು ವಾರದ ಆನ್ ಲೈನ್ ತರಬೇತಿಗೆ ಚಾಲನೆ ರಸ್ತೆ ವಿನ್ಯಾಸ, ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನ

ಕಲಬುರಗಿ,ಮಾ.19-ನಗರದ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ವಿಭಾಗವು ಆಯೋಜಿಸಿದ ರಸ್ತೆ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತ ಒಂದು ವಾರದ ಆನ್ಲೈನ್ ತರಬೇತಿಗ ಹೆಚ್ ಕೆ ಈ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲ್ಗುಂದಿ ಚಾಲನೆ ನೀಡಿದರು.
ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್. ಜಿ. ಪಾಟೀಲ್ ಅವರು ಸ್ವಾಗತಿಸಿದರು.
ರಿಫ್ರೇಶರ ಕಾರ್ಯಕ್ರಮದ ಸಂಯೋಜಕರಾದ ಡಾ. ಅರವಿಂದ ಕುಮಾರ್ ಹರವಾಳಕರ ಮಾತನಾಡಿ ಕಾರ್ಯಕ್ರಮದ ವಿವರವನ್ನು ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಎಸ್. ಹೆಬ್ಬಾಳ ಅವರು ರಿಫ್ರೇಶರ್ ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಎಸ್ ಎಸ್ ಕಲಶೇಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ ಕೋವಿಡ್-19 ನಿಂದಾಗಿ ಕಾಲೇಜಿನ ಹಲವಾರು ಕಾರ್ಯಕ್ರಮಗಳಿಗೆ ನಾವು ಇನ್ನಷ್ಟು ಪ್ರಯೋಗಾತ್ಮಕವಾಗಿ ತಂತ್ರಜ್ಞಾನವನ್ನು ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳಿಗೆ ತಿಳಿಯ ಹೇಳಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದೆಹಲಿಯ ಐ.ಎಸ್.ಟಿ.ಇ ಸದಸ್ಯ ಡಾ. ಶರಣಪ್ಪ ಜಿ ಮಲಶೆಟ್ಟಿ ಅವರು ಮಾತನಾಡಿ ಸಿವಿಲ್ ವಿಭಾಗವು ರೆಫ್ರೇಶರ್ ಕಾರ್ಯಕ್ರಮ ಮೊದಲನೇ ಆವೃತ್ತಿ ಯನ್ನು ಡಿಸೆಂಬರ್ನಲ್ಲಿ ಯಶಸ್ವಿ ಯಾಗಿ ಪೂರ್ಣಗೊಳಿಸಿದೆ, ಎರಡನೇ ಅವೃತಿಯು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ ಎಂದು ಹಾರೈಸಿದರು. ಹಾಗೆಯೇ ಐ.ಎಸ್.ಟಿ.ಇ ವತಿಯಿಂದ ಇಂತಹ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಹಾಗೂ ಇನ್ನೆಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲ್ಗುಂದಿ ಅವರು ಹೆಚ್ ಕೆ ಈ ಸಂಸ್ಥೆ ಹಾಗೂ ಪಿಡಿಎ ತಾಂತ್ರಿಕ ಮಹಾವಿದ್ಯಾಲಯವು ಪ್ರಾರ್ದೇಶಿಕ ಹಾಗು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಡಾ.ಶೃತಿ ಗಂದಗೆ ಕಾರ್ಯಕ್ರಮವನ್ನು ನಿರೂಪಿಸಿದರು,
ಈ ಸಂದರ್ಭದಲ್ಲಿ ಪ್ರೊ. ನಿತಿನ್ ಕೊಡ್ಲೆ, ಪ್ರೊ. ಗಿರೀಶ್ ಬಂಡಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.