ರಾಯಚೂರು.ಅ.೦೩- ಸರ್ಕಾರಿ ಬಾಲಕಿಯರ ವೃತ್ತಿಪರ ವಿದ್ಯಾರ್ಥಿ ವಸತಿ ನಿಲಯಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ಧಿಡೀರ್ ಭೇಟಿ ನೀಡಿ ವಿದ್ಯಾರ್ಥಿನಿಲಯದ ಆಹಾರದ ಗುಣಮಟ್ಟ ಹಾಗೂ ವಸತಿ ನಿಲಯಗಳ ವಾಸ್ತವತೆಯನ್ನು ಪರಿಶೀಲಿಸಿ ವಸತಿ ನಿಲಯ ಮೇಲ್ವಿಚಾರಕಿ ಹಾಗೂ ಅಡುಗೆ ಸಿಬ್ಬಂದಿಗಳಿಗೆ ವಸತಿ ನಿಲಯದಲ್ಲಿರುವ ಮಕ್ಕಳು ನಿಮ್ಮ ಮಕ್ಕಳಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ತರಾಟೆಗೆ ತೆಗೆದುಕೊಂಡರು.
ಗದ್ವಾಲ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವೃತ್ತಿಪರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳು ಸಚಿವರೊಂದಿಗೆ ಮಾತನಾಡಿ, ನಮಗೆ ಸರಿಯಾಗಿ ಗುಣಮಟ್ಟದ ಊಟ, ಭದ್ರತೆ, ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ತೆ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಹೆಚ್ಚುವರಿ ಕಾಟ್, ಕುಡಿಯುವ ನೀರು, ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಚಿವರಿಗೆ ತಿಳಿಸಿದರು.
ನಂತರ ಊಟದ ಕೊಠಡಿಗೆ ತೆರಳಿ ಆಹರವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಪ್ರತಿದಿನ ನೀವು ಇಲ್ಲೆ ಊಟ ಮಾಡುವಂತೆ ಸೂಚಿಸಿ ಗುಣಮಟ್ಟದ ಆಹಾರ ವಿದ್ಯಾರ್ಥಿಗಳಿಗೆ ನೀಡಬೇಕು. ಅಲ್ಲದೆ, ಇನ್ನಿತರ ಸಮಸ್ಯೆಗಳನ್ನು ಒಂದುವಾರದೊಳಗಾಗಿ ಪರಿಹರಿಸಬೇಕು ಇಲ್ಲದಿದ್ದರೆ ಅಮಾನತು ಮಾಡಲಾಗುವುದು ಎಂದು ವಸತಿ ನಿಲಯ ಮೇಲ್ವಿಚಾರಕಿ ಸೇರಿ ಅಡುಗೆ ಸಿಬ್ಬಂದಿಗಳಿದೆ ಎಚ್ಚರಿಸಿದರು. ಸಚಿವರು ವಿದ್ಯಾರ್ಥಿನಿಯರಿಗೆ ತಮ್ಮ ದೂರವಾಣಿಯ ವಿಜಿಟಿಂಗ್ ಕಾರ್ಡ್ ನೀಡಿ, ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಯದಿದ್ದರೆ ನೇರವಾಗಿ ನನಗೆ ಕರೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಜಯಣ್ಣ, ಕೆ.ಶಾಂತಪ್ಪ, ಜಿಂದಪ್ಪ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಲಕ್ಷ್ಮೀ ರಡ್ಡಿ, ನರಸಿಂಹಲು ಮಾಡಗಿರಿ, ಬಿ.ರಮೇಶ, ಕುರಬದೊಡ್ಡಿ ಅಂಜನೇಯ್ಯ, ಬಸವರಾಜ ಪಟೀಲ್ ಅತ್ತನೂರು, ಹನುಮಂತ ಹೋಸೂರು, ತಾಯನಗೌಡ ಸೇರಿದಂತೆ ಅನೇಕರಿದ್ದರು.