ಒಂದು ವಾರದಲ್ಲಿ 47 ಕೊರೋನಾ ಸಾವು

ಕಲಬುರಗಿ ಏ 25: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆಯಲ್ಲಿ 47 ಜನ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೃತಪಟ್ಟವರಲ್ಲಿ ಕಲಬುರಗಿ ನಗರದವರೇ ಅಧಿಕವಾಗಿದ್ದು 47 ರಲ್ಲಿ 31 ಜನ ಕಲಬುರಗಿ ನಗರದವರಾಗಿದ್ದಾರೆ.
ಕೊರೋನಾ ಸೋಂಕಿಗೆ ಕಳೆದ ವರ್ಷ ದೇಶದ ಮೊದಲ ಸಾವು ಕಲಬುರಗಿಯಲ್ಲಿಯೇ ಸಂಭವಿಸಿತ್ತು.ಈಗ ಎರಡನೆಯ ಅಲೆಯಲ್ಲಿ ಈ ವಾರ ಜಿಲ್ಲೆಯಲ್ಲಿ ದಿನವೊಂದಕ್ಕೆ ಸರಾಸರಿ 6 ರಿಂದ 7 ಜನ ಸಾವನ್ನಪ್ಪಿದ್ದಾರೆ.ಕೊರೋನಾ ಸೋಂಕು ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 425 ಸಾವು ಸಂಭವಿಸಿವೆ.
ಚೇತರಿಸಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿದ್ದು ,ನಿನ್ನೆಯ ವರದಿಯಂತೆ 289 ಜನ ಗುಣಮುಖರಾಗಿದ್ದಾರೆ. ಕಳೆದ ವರ್ಷದಿಂದ ಇಲ್ಲಿಯವರೆಗೆ 33,828 ಜನರಿಗೆ ಸೋಂಕು ತಗುಲಿದ್ದು,ಅದರಲ್ಲಿ 26683 ಜನ ಗುಣಮುಖರಾಗಿದ್ದಾರೆ.