
ನವದೆಹಲಿ,ಏ.೩-ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವೆಯೇ ಕಳೆದ ವಾರ ಹೊಸದಾಗಿ ೧೮,೪೫೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ
.೨೦೨೨ರ ಜನವರಿ ತಿಂಗಳಲ್ಲಿ ೩ ನೇ ತರಂಗದ ವೇಳೆ ಕಾಣಿಸಿಕೊಂಡಷ್ಟು ಸೋಂಕು ಮಾರ್ಚ್ ೨೬ ರಿಂದ ಏಪ್ರಿಲ್ ೧ರ ಅವಧಿಯಲ್ಲಿ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ನಿನ್ನೆ ದಾಖಲೆ ೩,೮೦೦ ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ, ಇದು ಆರು ತಿಂಗಳಲ್ಲಿ ಅತಿ ಹೆಚ್ಚು ದೈನಂದಿನ ಸಂಖ್ಯೆಯಾಗಿದೆ, ಕಳೆದ ಏಳು ದಿನಗಳಲ್ಲಿ ಸೋಂಕುಗಳು ವೇಗವಾಗಿ ದರದಲ್ಲಿ ಏರಿದೆ. ಅದಕ್ಕೂ ಹಿಂದಿನವಾರ ೮,೭೮೧ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು ಕಳೆದ ವಾರ ದೇಶದಲ್ಲಿ ೧೮,೪೫೦ ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ, ಹಿಂದಿನ ಏಳು ದಿನಗಳ ಸಂಖ್ಯೆ ಕ್ಕಿಂತ ೨.೧ ಪಟ್ಟು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕು ಸಂಖ್ಯೆ ದ್ವಿಗುಣ ಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿರುವುದು ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ. ದೈನಂದಿನ ಪ್ರಕರಣಗಳು ತುಲನಾತ್ಮಕವಾಗಿ ಕಡಿಮೆಯಾಗಿವೆ ಮತ್ತು ಕೋವಿಡ್ ಸಾವುಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಕಳೆದ ಏಳು ದಿನಗಳಲ್ಲಿ, ೨೯ ರಿಂದ ೩೬ ಸಾವುಗಳು ದಾಖಲಾಗಿವೆ.ಕೇರಳದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ.
ಕೇರಳ, ಗೋವಾ ಮತ್ತು ಉತ್ತರದ ರಾಜ್ಯಗಳಾದ ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದೆ.
ಈ ಹೆಚ್ಚಿನ ರಾಜ್ಯಗಳಲ್ಲಿ, ಕಳೆದ ಏಳು ದಿನಗಳ ಒಟ್ಟು ಪ್ರಕರಣ ಹಿಂದಿನ ಏಳು ದಿನಗಳ ಲೆಕ್ಕಾಚಾರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಹಿಮಾಚಲ ಪ್ರದೇಶದಲ್ಲಿ ದೇಶದ ಆರನೇ ಅತಿ ಹೆಚ್ಚು ಸಾಪ್ತಾಹಿಕ ಪ್ರಕರಣಗಳಲ್ಲಿ ಸುಮಾರು ೧,೨೦೦ ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ೪೦೯ ರಿಂದ ಹೆಚ್ಚಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಹೆಚ್ಚಿದ್ದರೂ, ಕೆಲವು ವಾರಗಳಿಂದ ಸೋಂಕು ಹರಡುತ್ತಿದೆ. ಬೆಳವಣಿಗೆಯ ದರ ಮಹಾರಾಷ್ಟ್ರದಲ್ಲಿ ಸ್ಥಿರವಾಗಿದ್ದು ಗುಜರಾತ್‌ನಲ್ಲಿ ಕಳೆದ ವಾರದಲ್ಲಿ ನಿಧಾನಗತಿಯಲ್ಲಿ ಎಂದು ತಿಳಿಸಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸೋಂಕುಗಳು ಸ್ಥಿರ ದರದಲ್ಲಿ ಏರಿಕೆಯಾಗುತ್ತಲೇ ಇದ್ದು, ತೆಲಂಗಾಣದಲ್ಲಿ ಇಳಿಕೆ ಮತ್ತು ಆಂಧ್ರಪ್ರದೇಶದಲ್ಲಿ ಉಲ್ಬಣವು ಏರಿಕೆಯಾಗುತ್ತಿದ್ದು ಕೇರಳ, ಕಳೆದ ವಾರದಲ್ಲಿ ಸುಮಾರು ೪,೦೦೦ ಹೊಸ ಪ್ರಕರಣಗಳೊಂದಿಗೆ, ೧,೩೩೩ ರಿಂದ ಮೂರು ಪಟ್ಟು ಹೆಚ್ಚಾಗಿದೆ.