ಒಂದು ವರ್ಷದಿಂದ ಬಿಜೆಪಿ ಪಕ್ಷ ಸಂಘಟನೆ-ವರ್ತೂರು

ಕೋಲಾರ, ಮಾ ೩೧- ನಾನು ಒಂದು ವರ್ಷದಿಂದ ಬಿಜೆಪಿ ಪಕ್ಷದ ಸಂಘಟನೆ ಮಾಡಿದ್ದೇನೆ, ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡಿದ್ದರೆ ಚೆನ್ನಾಗಿತ್ತು, ಸಿದ್ದರಾಮಯ್ಯ ಬಂದಿದ್ರೆ ಇಲ್ಲವಾದ್ರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಇಲ್ಲಿ ವೀಕ್ ಆಗಿರುತ್ತಿತ್ತು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟರು.
ಕೋಲಾರದಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಸುದ್ಧಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರಚಾರ ಮುಗಿಸಿದ್ದೇನೆ, ಇವತ್ತಿನಿಂದ ನಗರ ಭಾಗದಲ್ಲಿ ಪ್ರಚಾರ ಮಾಡಲಾಗುವುದು, ಯಾರೇ ಪ್ರತಿಸ್ಪರ್ಧಿ ಆದರೂ ಚುನಾವಣೆ ಎದುರಿಸುತ್ತೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಕೋಲಾರಕ್ಕೆ ಏ.೫ರಂದು ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ರಾಹುಲ್ ಗಾಂಧಿ ಬಂದರೆ, ನರೇಂದ್ರ ಮೋದಿ ಕರೆದುಕೊಂಡು ಬರುತ್ತೇವೆ, ರಾಹುಲ್ ಗಾಂಧಿಗೂ ಕೋಲಾರಕ್ಕೂ ಏನೂ ಸಂಬಂಧ ಎಂದ ಅವರು ರಾಹುಲ್ ಗಾಂಧಿ ಬಂದು ಹೋದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿಫಲವಾಗುತ್ತದೆ, ರಾಹುಲ್ ಗಾಂಧಿಗೆ ಇಮೇಜ್ ಇಲ್ಲ, ಏನು ಬದಲಾವಣೆ ಆಗೋದಿಲ್ಲ ಎಂದರು.
ಹಿಂದುಳಿದ ವರ್ಗದ ನಾಯಕನ ಬಗ್ಗೆ ಮಾತನಾಡಿದಕ್ಕೆ ಕೋರ್ಟ್ ಕ್ರಮವಹಿಸಿದೆ, ಈ ಬಾರಿಯೂ ಅದೇ ರೀತಿ ಭಾಷಣ ಕೋಲಾರದಲ್ಲಿ ಮಾಡಿದರೆ ತಲೆಕೆಟ್ಟಿರೋರು ಕೋರ್ಟ್ಗೆ ಇನ್ನೊಂದು ಅರ್ಜಿ ಹಾಕ್ತಾರೆ, ರಾಹುಲ್ ಕಾರ್ಯಕ್ರಮಕ್ಕೆ ಮೂರು ಜಿಲ್ಲೆಯಲ್ಲ ಇಡೀ ರಾಜ್ಯದವರನ್ನು ಕರೆತಂದರೂ ೫೦ ಸಾವಿರ ಜನ ಸೇರಿಸೋಕೆ ಆಗೋದಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಬಗ್ಗೆ ನನಗೆ ಮೊದಲಿಂದಲೂ ಸಾಫ್ಟ್ ಕಾರ್ನರ್ ಇದೆ, ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ಮೊದಲಿಂದಲೂ ನಂಬಿಕೆ ಇದೆ, ಬಿಜೆಪಿ ಟಿಕೆಟ್ ಯಾರಿಗೂ ನೀಡಿದರೂ ಕೆಲಸ ಮಾಡಿ ಗೆಲ್ಲಿಸುತ್ತೇನೆ, ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಮನೆಯಲ್ಲಿ ೫ ವರ್ಷ ಮಲಗಿದ್ದೆ ನನಗೆ ಆಶೀರ್ವಾದ ಎಂದು ತಿಳಿಸಿದರು.