ಒಂದು ವರ್ಷದಲ್ಲಿ ಕಾಂಗ್ರೆಸ್ ಸರಕಾರದ ಸಾಧನೆ ಶೂನ್ಯ: ಅಖಿಲಗೌಡ ಪಾಟೀಲ

ಕೊಲ್ಹಾರ: ಮೇ.22:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯಿತು. ಈ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‍ನ ಯಾವ ಶಾಸಕರಿಂದಲೂ ಯಾವ ಕ್ಷೇತ್ರದಲ್ಲಿಯೂ ಒಂದೇ ಒಂದು ಗುದ್ದಲಿ ಪೂಜೆ ನಡೆದಿಲ್ಲ. ಅಂದರೆ ಏನು ಅರ್ಥ? ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆ ಮಾಡಿದೆ ಎಂದೇ ಅರ್ಥ ಎಂದು ಬಿಜೆಪಿ ಯುವ ಮೋರ್ಚಾದ ಮಂಡಲ ಅಧ್ಯಕ್ಷ ಅಖಿಲಗೌಡ ಪಾಟೀಲ ಲೇವಡಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರ ಗ್ಯಾರಂಟಿ ಗ್ಯಾರಂಟಿ ಎಂದು ಬಡಬಡಿಸುತ್ತಿದೆಯೆ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಒಂದು ವೇಳೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗಿದ್ದರೆ ಕ್ಷೇತ್ರದಲ್ಲಿ ಎಲ್ಲಿಯಾದರೂ ಒಂದು ಗುದ್ದಲಿ ಪೂಜೆ ನಡೆಯುತ್ತಿತ್ತು.ಚುನಾವಣಾ ನೀತಿ ಸಂಹಿತೆಯನ್ನು ಹೊರತುಪಡಿಸಿಯೂ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನಡೆದ ಉದಾಹರಣೆಗಳೆ ಇಲ್ಲ ಎಂದು ಅವರು ಹೇಳಿದ್ದರು
ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ.

ಗ್ಯಾರಂಟಿಗಳನ್ನು ಮತ್ತು ಸರಕಾರದ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಮಹಿಳೆಯರು ಇಂದಿಗೂ ಕಚೇರಿಗಳಿಗೆ ಆಧಾರ, ರೇಷನ್ ಕಾರ್ಡ್ ಹಿಡಿದು ಕೊಂಡು ಅಲೆದಾಡುತ್ತಿದ್ದಾರೆ.ಇದು ತುಂಬಾ ನಾಚಿಗ್ಗೇಡಿನ ಸಂಗತಿ. ಸರಕಾರ ಅಲ್ಪ ಪ್ರಮಾಣದ ಸೌಲಭ್ಯಗಳನ್ನು ಜನತೆಗೆ ನೀಡಿ ತಾನೇನೋ ದೊಡ್ಡ
ಸಾಧನೆ ಮಾಡಿರುವಂತೆ ಫೆÇೀಸು ಕೊಡುತ್ತಿರುವುದು ನಾಚಿಗ್ಗೇಡಿನ ವಿಷಯ. ಈ ಮೂಲಕ ಸರಕಾರ ಕರ್ನಾಟಕವನ್ನು ಅವನತಿಯತ್ತ ದೂಡುತ್ತಿದೆ ಎಂದರು. ಒಂದು ವರ್ಷದಲ್ಲಿ ಸರಕಾರದ ಸಾಧನೆ ಶೂನ್ಯವಲ್ಲದೆ ಬೇರೇನೂ ಇಲ್ಲವೆಂದು ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದಾರೆ.