ಒಂದು ರೂಗೆ ಪ್ರೀಮಿಯರ್ ಶೋ

ಬೆಂಗಳೂರು,ಮೇ.೩೦- ಯುವತಾರಾ ದಂಪತಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಜೋಡಿಯ “ಯದಾ ಯದಾ ಹಿ” ಚಿತ್ರ ಬಿಡುಗಡೆಗೆ ಮುನ್ನವೇ ಅಭಿಮಾನಿಗಳಿಗಾಗಿ ೧ ರೂಪಾಯಿಗೆ ನಾಳೆ ಪ್ರೀಮಿಯರ್ ಶೋ ತೋರಿಸಲು ಚಿತ್ರ ತಂಡ ಮುಂದಾಗಿದೆ.

ಬೆಂಗಳೂರಿನ ವಿರೇಶ್ ಚಿತ್ರಮಂದಿರ ಮತ್ತು ಹುಬ್ಬಳ್ಳಿಯ ಸುಧಾ ಚಿತ್ರಮಂದಿರದಲ್ಲಿ ವಿಶೇಷ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದು ಟಿಕೆಟ್ ದರ ೧ ರೂಪಾಯಿ ನಿಗದಿ ಪಡಿಸಿದ್ದು ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಸುವರ್ಣಾವಕಾಶ ಕಲ್ಪಿಸಿದೆ.

ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಪ್ರೀಮಿಯರ್ ಶೋ ಟಿಕೆಟ್ ದರವನ್ನು ೧ ರೂಪಾಯಿಗೆ ನಿಗಧಿ ಮಾಡಲಾಗಿದ್ದು ನಾಳೆ ಸಂಜೆ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಇಂತಹದೊಂದು ಅವಕಾಶವನ್ನು ನಿರ್ಮಾಪಕರು ಕನ್ನಡ ಸಿನಿ ಪ್ರೇಕ್ಷಕರು ಮತ್ತು ಅಭಿಮಾನಿಗಳಿಗೆ ಒದಗಿಸಿಕೊಟ್ಟಿದ್ದಾರೆ.

ದೇಶದ ಬೇರೆ ಬೇರೆ ರಾಜ್ಯಗಳಿಗ ಹೋಲಿಸಿದರೆ ಕರ್ನಾಟಕ ಅದರಲ್ಲಿಯೂ ಬೆಂಗಳೂರಿನಲ್ಲಿ ಟಿಕೆಟ್ ದರ ಅತ್ಯಂದ ದುಬಾರಿ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯದಾ ಯದಾ ಹಿ ಚಿತ್ರದ ನಿರ್ಮಾಪಕ ರಾಜೇಶ್ ಅಗರ್ ವಾಲ್ ಅವರು ೧ ರೂಪಾಯಿ ಟಿಕೆಟ್ ದರ ನಿಗಧಿ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಚಿತ್ರದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ಮತ್ತು ದಿಗಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಶೋಕ್ ತೇಜಾ ಆಕ್ಷನ್ ಕಟ್ ಹೇಳಿದ್ದು ರಾಜೇಶ್ ಅಗರ್ ವಾಲ್ ನಿರ್ಮಾಣ ಮಾಡಿದ್ದಾರೆ.
ಇದೇ ವಾರ ಚಿತ್ರವನ್ನು ಜಾಕ್ ಮಂಜು ಚಿತ್ರವನ್ನು ತೆರೆಗೆ ತರುತ್ತಿದ್ದು ಅದಕ್ಕೂ ಮುನ್ನ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಾಳೆ ೧ ರೂಪಾಯಿ ಟಿಕೆಟ್ ದರ ನಿಗಧಿ ಮಾಡಿ ವಿಶೇಚ ಪ್ರಿಮಿಯರ್ ಶೋ ಹಮ್ಮಿಕೊಳ್ಳಲಾಗಿದೆ