ಒಂದು ಯೂನಿಟ್ ಗೆ 10 ಕೆ.ಜಿ.ಅಕ್ಕಿ ನೀಡಲು ಮನವಿ

ದಾವಣಗೆರೆ.ಮೇ.೪; ಕೋವಿಡ್ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಲಾಕ್ ಡೌನ್ ಮಾಡಿದ್ದು ಸರಿಯಾದ ಕ್ರಮವಾಗಿದೆ ಆದರೆ ರಾಜ್ಯದಲ್ಲಿನ ಬಡವರಿಗೆ , ಬಿಪಿಎಲ್ವ್ಯಾಪ್ತಿಯ ಪಡಿತರ ಫಲನುಭವಿಗಳಿಗೆ   ಒಂದು ಯೂನಿಟ್ ಗೆ 10 K.G.ಯಂತೆ ಉಚಿತ ವಿತರಣೆ ಮಾಡಲು ಕಾಂಗ್ರೆಸ್ ಮುಖಂಡರು , ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ  ಒತ್ತಾಯಿಸಿದ್ದಾರೆ.ರೈತ ಕೂಲಿ ಕಾರ್ಮಿಕರಿಗೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರತಿ ಗ್ರಾಮಗಳಲ್ಲಿ ಇಂತಹ ಕೋವಿಡ್ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿರುವುದಿಲ್ಲ ಆದರಿಂದ ಕೂಡಲೇ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೈತ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಕೂಲಿ ಕಾರ್ಮಿಕರ ಹಿತವನ್ನು ಕಾಪಡಬೇಕೆಂದು  ಸರ್ಕಾರಕ್ಕೆ ಮನವಿ ಮಾಡಿದ್ದಾರೆ.