ಒಂದು ಮೋಜಿನ ದಿನ: ಕಾರ್ಯಕ್ರಮ


(ಸಂಜೆವಾಣಿ ವಾರ್ತೆ)
ಬಾದಾಮಿ,ಜು3 ನಮ್ಮ ಪೂರ್ವಜರು ತಮ್ಮ ಜಾನಪದ ಸಾಹಿತ್ಯದ ಮೂಲಕ ಕಲೆ ಸಂಸ್ಕøತಿ ಸಂಸ್ಕಾರಗಳನ್ನ ನೀಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಹಾಡಿನ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದರು ಎಂದು ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನವರ ಹೇಳಿದರು
ಅವರು ನಗರದ ಶ್ರೀ ವೀರಪುಲಕೇಶಿ ವಿದ್ಯಾವರ್ಧ ಸಂಸ್ಥೆಯ ಶ್ರೀ ಎಸ್.ಬಿ. ಮಮದಾಪೂರ ಪದವಿ ಮಾಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ. ಮತ್ತು ಮಹಿಳಾ ಸಬಲೀಕರಣ ಘಟಕದವತಿಯಿಂದ ಹಮ್ಮಿಕೊಂಡ ಒಂದು ದಿನ ಮೋಜಿನ ದಿನ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿ ಜಾನಪದ ಕಲೆಯಲ್ಲಿ ನಮ್ಮ ಹಿಂದಿನ ಜನ ಸಾಕಷ್ಟು ತಮ್ಮ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಉತ್ತಮ ಸಾಮಾಜವನ್ನು ನಿರ್ಮಾಣ ಮಾಡಲು ಆಯಾ ಸಂದರ್ಭಕ್ಕೆ ಅನುಸಾರವಾಗಿ ಹಾಡುಗಳನ್ನು ಹಾಡಿ ಕಾಲವನ್ನು ಬಹಳಷ್ಟು ಸಂತೋಷದಿಂದ ಕಳೆಯುತ್ತಿದ್ದರು. ಗಿಗಿಪದÀ ಲಾವಣಿ ಪದ ಬೀಸುಕಲ್ಲ ಪದ, ಕುಟ್ಟು ಪದ ಈ ರೀತಿ ಬೇರೆ ಬೇರೆ ತರಹದ ಹಾಡುಗಳಲ್ಲಿ ವಿಷೇಶವಾದ ಅರ್ಥವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದರು. ಇತ್ತೀಚಿನ ಒತ್ತಡದ ಮತ್ತು ಜಾಲತಾಣದ ಮುಂದೆ ಜಾನಪದ ಕಲೆ ನಶಿಸಿ ಹೋಗುತ್ತೀರುವುದು ವಿಷಾದವೆನುಸುತ್ತದೆ.

ಪ್ರಾಚಾರ್ಯ ರವೀಂದ್ರ ಮೂಲಿಮನಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಸಹ ಪ್ರಾಧ್ಯಪಕ ಎಸ್.ಆರ್. ಮಾಳಗಿ, ಮಹಿಳಾ ಪ್ರತಿನಿಧಿ ಪ್ರಿಯಾಂಕಾ ಮೂಲಿಮನಿ ಉಪಸ್ಥಿತರಿದ್ದರು. ಮಹಿಳಾ ಘಟಕದ ಸಯೋಜಕಿ ಸಂಗೀತಾ ಪಾಟೀಲ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಸ್ಫೂರ್ತಿ ಕರಿನಂದಿ ಮತ್ತು ಶ್ರೀದೇವಿ ಬಡಿಗೇರ ನಿರೂಪಿಸಿ ಸಹ ಪ್ರಾಧ್ಯಾಪಕಿ ನಾಗವೇಣಿ ಕಲಗುಡಿ ವಂದಿಸಿದರು. ಸಹ ಪ್ರಾಧ್ಯಾಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.