ಒಂದು ದೇಶ ಒಂದು ಚುನಾವಣೆಗೆ ಖರ್ಗೆ ವಿರೋಧ

ನವದೆಹಲಿ,ಜ.೨೦- ದೇಶದಲ್ಲಿ “ ಒಂದು ದೇಶ ಒಂದು ಚುನಾಚಣೆ” ಸಂಬಂಧ ಪ್ರಕ್ರಿಯೆ ತೀವ್ರ ವಿರೋದ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದೀಯ ಆಡಳಿತ ವ್ಯವಸ್ಥೆಯಲ್ಲಿ ಏಕಕಾಲಕ್ಕೆ ಚುನಾವಣೆ ಎಂಬ ಪರಿಕಲ್ಪನೆಗೆ ಯಾವುದೇ ಸ್ಥಾನವಿಲ್ಲ ಎಂದಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆಯ ಉನ್ನತ ಮಟ್ಟದ ಸಮಿತಿಯ ಕಾರ್ಯದರ್ಶಿ ನಿತೇನ್ ಚಂದ್ರ ಅವರಿಗೆ ಪತ್ರ ಬರೆದಿರುವ ಖರ್ಗೆ, ತಮ್ಮ ಪಕ್ಷ ಒಂದು ದೇಶ ಒಂದು ಚುನಾವಣೆಯ ಕಲ್ಪನೆಯನ್ನು ಬಲವಾಗಿ ವಿರೋಧಿಸುತ್ತಿದೆ ಎಂದಿದ್ದಾರೆ.
ಒಂದು ದೇಶ ಒಂದು ಚುನಾವಣೆ ನಡೆಸುವ ಪದ್ಧತಿ ಕೈಬಿಡಬೇಕು ಮತ್ತು ಉನ್ನತ ಅಧಿಕಾರ ಸಮಿತಿ ರಚಿಸಬೇಕು
ಏಕಕಾಲದ ಚುನಾವಣೆಗಳು ಸಂವಿಧಾನದಲ್ಲಿರುವ ಒಕ್ಕೂಟ ವ್ಯವಸ್ಥೆ ಮತ್ತು ಮತ್ತು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ
“ಕಾಂಗ್ರೆಸ್ ಪಕ್ಷ ಮತ್ತು ದೇಶದ ಜನತೆಯ ಪರವಾಗಿ, ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತಮ್ಮ ಪಕ್ಷದ ನಿಲುವನ್ನು ನಾವು ತಿಳಿಸಿದ್ದೇವೆ. ಜೊತೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ತಮ್ಮ ವಿರೋಧವಿದೆ ಎಂದಿದ್ದಾರೆ.
ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ಕೇಂದ್ರ ಸರ್ಕಾರ ದುರಪಯೋಗ ಪಡಿಸಿಕೊಳ್ಳುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಲು ಮತ್ತು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು. ಈ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಶಕ್ತಿ ಮತ್ತು ಗೌರವಿದೆ ಎಂದು ತಿಳಿಸಿದ್ದಾರೆ.
ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಇನ್ನೂ ಅರ್ಧ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲೇ ಇರುವ ಹಲವಾರು ಶಾಸಕಾಂಗ ಸಭೆಗಳನ್ನು ವಿಸರ್ಜನೆ ಮಾಡಬೇಕಾಗುತ್ತದೆ ಮತ್ತು ಇದು ಆ ರಾಜ್ಯಗಳ ಮತದಾರರಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದ್ದಾರೆ.
ಸಂಸದೀಯ ಆಡಳಿತ ವ್ಯವಸ್ಥೆ ಅಳವಡಿಸಿಕೊಂಡಿರುವ ದೇಶದಲ್ಲಿ ಚುನಾವಣೆಯ ಪರಿಕಲ್ಪನೆಗೆ ಯಾವುದೇ ಸ್ಥಳವಿಲ್ಲ. ಇಂತಹ ರೂಪಗಳು ಸಂವಿಧಾನದಲ್ಲಿರುವ ಒಕ್ಕೂಟದ ಭರವಸೆಗಳಿಗೆ ವಿರುದ್ಧವಾಗಿವೆ ಎಂದು ತಿಳಿಸಿದ್ದಾರೆ.
ನೀತಿ ಆಯೋಗ ಸಂವಿಧಾನವನ್ನು ದುರುದ್ದೇಶಪೂರ್ವಕವಾಗಿ ವ್ಯಾಖ್ಯಾನಿಸುತ್ತದೆ, ಒಂದು ರಾಜ್ಯ ವಿಧಾನಸಭೆಯ ಅಧಿಕಾರಾವಧಿ ಐದು ವರ್ಷಗಳ ಅಗತ್ಯವಿಲ್ಲ ಮತ್ತು ಗಣನೀಯವಾಗಿ ಕಡಿಮೆಯಾಗಬಹುದು ಎಂದು ಹೇಳಿರುವುದು ಸರಿಯಲ್ಲ ಎಂದಿದ್ದಾರೆ.
ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭೆ ಅಧಿಕಾರಾವಧಿಯನ್ನು ಮೊಟಕುಗೊಳಿಸುವಂತೆ ಅದು ಸೂಚಿಸುತ್ತದೆ. ಎರಡು ವರ್ಷಗಳಿಗಿಂತ ಹೆಚ್ಚು ಕಾಲ, ಮತ್ತು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯ ವಿಧಾನಸಭೆ ಅಧಿಕಾರಾವಧಿಯನ್ನು ೨ ವರ್ಷಗಳಿಗಿಂತ ಹೆಚ್ಚು ವಿಸ್ತರಿಸಲು ಉದ್ದೇಶಿಸಿದೆ ಇದು ಯಾವ ನ್ಯಾಯ ಎಂದಿದ್ದಾರೆ.

ಕೇಂದ್ರಕ್ಕೆ ಅವಕಾಶವಿಲ್ಲ
ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಅಥವಾ ರಾಜ್ಯ ಸರ್ಕಾರಗಳನ್ನು ಅಮಾನತುಗೊಳಿಸಲು ಸಂವಿಧಾನ, ಕೇಂದ್ರ ಸರ್ಕಾರಕ್ಕೆ ಎಲ್ಲಿಯೂ ಅಧಿಕಾರ ನೀಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಿಂದ ಕಲ್ಯಾಣ ಯೋಜನೆಗಳು ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಧಕ್ಕೆಯಾಗುತ್ತದೆ ಎಂಬ ವಾದವೂ ನಿರಾಧಾರವಾಗಿದೆ “ಮೊದಲೇ ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಯೋಜನೆಗಳು ಚುನಾವಣೆಯ ಸಮಯದಲ್ಲಿ ಮುಂದುವರೆಯುತ್ತವೆ ಮತ್ತು ಯಾವುದೇ ಸಂದರ್ಭದಲ್ಲಿ, ಚುನಾವಣಾ ಆಯೋಗ ಯಾವಾಗಲೂ ಅನುಮೋದಿಸಬಹುದು ಎಂದಿದ್ದಾರೆ.
ಚುನಾವಣೆಗಳನ್ನು ನಡೆಸುವ ವೆಚ್ಚ ತುಂಬಾ ಹೆಚ್ಚಾಗಿದೆ ಎಂಬ ವಾದ “ಆಧಾರರಹಿತ” “ಐದು ವರ್ಷಗಳಿಗೊಮ್ಮೆ ಚುನಾವಣೆ ಪರಿಗಣಿಸಿದರೆ, ಹಿಂದಿನ ಐದು ವರ್ಷಗಳ ಒಟ್ಟು ಕೇಂದ್ರ ಬಜೆಟ್‌ನ ವೆಚ್ಚ ಶೇಕಡಾ ೦.೦೨ ಕ್ಕಿಂತ ಕಡಿಮೆಯಾಗಿದೆ ಎಂದಿದ್ದಾರೆ.