ಒಂದು ದಿನದ ಹಂಪಿ ಉತ್ಸವ ವಿರೋಧಿಸಿ ಪ್ರತಿಭಟನೆ

ಬಳ್ಳಾರಿ, ನ.8: ಈ ತಿಂಗಳ ‌13 ರಂದು ಹಂಪಿ ಉತ್ಸವವನ್ನು ಒಂದು ದಿನ ಆಚರಿಸುತ್ತಿರುವುದನ್ನು ವಿರೋಧಿಸಿ ಮತ್ತು ಮೂರು ದಿನಗಳ ಕಾಲ ನಡೆಸಬೇಕೆಂದು ಒತ್ತಾಯಿಸಿ ಇಂದು ನಗರದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಮತ್ತು ನವ ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ಮಾಡೋದು ಒಂದು ದಿನದ ಉತ್ಸವ, ಗೊತ್ತಿಲ್ಲ ಅವರಿಗೆ ವಿಜಯನಗರದ ವೈಭವ ಮೂರು ದಿನ ಉತ್ಸವ ಮಾಡಲೇಬೇಕು. ನಡುವೆ ನಿರ್ಲಕ್ಷ ಸಾಕು ಸಾಕು, ಹಂಪಿ ಉತ್ಸವದ ಘನತೆ ಕಾಪಾಡಿ ಮೂರು ದಿನ‌ ಉತ್ಸವ ಮಾಡಿ ನೀವು‌ ಮಾಡೋದು ತುಂಗಾ ಆರತಿ, ನಿಮಗೆ ಗೊತ್ತಿಲ್ಲ ಹಂಪಿ ಉತ್ಸವದ ಕೀರ್ತಿ, ಹೀಗೆ ಹಲವು ಘೋಷಣೆಗಳ ಫಲಕಗಳನ್ನು ಮತ್ತು ತೊಗಲು ಗೊಂಬೆಗಳನ್ನು ಹಿಡಿದು.‌ ನಗರದ ನಾರಾಯಣ ರಾವ್ ಉದ್ಯಾನವನದಿಂದ ಗಡಿಗಿ ಚೆನ್ನಪ್ಪ ವೃತ್ತದವರಗೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಸಂಚಾಲಕ ಕೆ. ಜಗದೀಶ್ ಮತ್ತು ನವಕರ್ನಾಟಕ ಯುವಶಕ್ತಿಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ ಮಾತನಾಡಿ, ಹಂಪಿ‌ ಉತ್ಸವ ದೇಶ ವಿದೇಶ ಕಲಾವಿದರ ಪ್ರದರ್ಶನ ಮತ್ತು ಪ್ರವಾಸಿಗರ ವೀಕ್ಷಣೆಯಿಂದ ಮಹತ್ವ ಪಡೆದಿದ್ದಾಗಿದೆ.
ಇಂತಹ ಉತ್ಸವವನ್ನು ಕೇವಲ‌ ಕಾಟಾಚಾರಕ್ಕೆ ಆಚರಿಸುವುದು ಬೇಡ, ಕೊರೋನಾ ಎನ್ನುವುದಾದರೆ ಬರುವ ಜನವರಿ ತಿಂಗಳಲ್ಲಿ‌ ಬೇಕಾದರೆ ಆಚರಿಸಲು ಈ ಒಂದು ದಿನದ ಉತ್ಸವ ಬೇಡ ಎಂದರು.
ಕಲಾವಿದರಾದ ಸುಬ್ಬಣ್ಣ ಸಿಳ್ಳೇಕ್ಯಾತ, ಆರ್.ಕೆ. ಕಲ್ಲಪ್ಪ, ಹನುಮಾವಧೂತ, ಹೆಚ್.ಎಂ‌ ಚಂದ್ರಶೇಖರ, ಕೊಳಗಲ್ಲು ಜಗದೀಶಯ್ಯ, ಕುಡಿತಿನಿ ಪ್ರಕಾಶ್, ಹಳ್ಳದ ಬಸಪ್ಪ, ಬ್ಲಡ್ ದೇವಣ್ಣ, ಟಿ.ಎಂ.ಪಂಪಾಪತಿ, ಗಿರಿಬಾಬು, ಕೆ. ಮಂಜು, ಎಂ.ಮಂಜು, ಮಿಥುನ್, ಮುಂತಾದವರು ಭಾಗವಹಿಸಿದ್ದರು.