ಒಂದು ದಿನದ ತರಬೇತಿ ಕಾರ್ಯಗಾರ

ಕಲಬುರಗಿ: ಅ.18: ಸೇವಾ ಸಂಗಮ ಸಂಸ್ಥೆ, ಕೋಟನೂರ (ಡಿ) ಹಾಗೂ ಅಜೀಮ್ ಪ್ರೇಮಜಿ ಫೌಂಡೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಬೆಳವಣಿಗೆ ಕುಂಠಿತ ಮಕ್ಕಳ ಶೀಘ್ರ ಪತ್ತೆ ಹಚ್ವುವಿಗೆ ಮತ್ತು ಆರಂಭಿಕ ಶಿಕ್ಷಣ ಕುರಿತಾದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಮೀಣ ಪುನರ ವಸತಿ ಕಾರ್ಯಕರ್ತರು ಹಾಗೂ ಗ್ರಾಮಪಂಚಾಯತ ಸದಸ್ಯರಿಗೆ ಸೇವಾ ಸಂಗಮ ಸಂಸ್ಥೆಯಲ್ಲಿ ಆಯೋಜಿಸಲಾಯಿತು, ಕಾರ್ಯಕ್ರಮವನ್ನು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಫಾದರ ಸ್ಟಾನಿ ಲೋಬೋ ಅವರು ಮಾತನಾಡುತ್ತಾ ಈ ತರಬೇತಿಯಲ್ಲಿ
ಭಾಗವಹಿಸಿದಂತಹ ಪ್ರತಿಯೋಬ್ಬ ಜನ ಸಂಪರ್ಕ ಅಧಿಕಾರಿಗಳು ಅಂಗನವಾಡಿಯವರು ಈ ತರಬೇತಿಯನ್ನು ಸರಿಯಾಗಿ ಉಪಯೋಗಿಸಿಕೊಂಡು ಸಮಾಜದಲ್ಲಿರುವ ಬೆಳವಣಿಗೆ ಕುಂಠಿತ ಮಕ್ಕಳ ಪಾಲಕರಿಗೆ ಹಾಗೂ ಪೋಷಕರಿಗೆ ಈ ವಿಷಯದ ಕುರಿತು ಅರಿವನ್ನು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫಾದರ ಸ್ಟಿವನ್ ವೇಗಸ್ ಅವರು ಸಮಾಜದಲ್ಲಿರುವ ಜನರ ಸೇವಯನ್ನು ಮಾಡುವುದಕ್ಕಾಗಿ ದೇವರು ಕೆಲವರನ್ನು ಆಯ್ಕೆ ಮಾಡಿದಾನೆ, ಅದರಂತೆ ಸಮಾಜದ ಅಭಿವೃದ್ದಿಗಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮೀಣ ಪುನರವಸತಿ ಕಾರ್ಯಕರ್ತರು ಸೇವೆ ಶ್ಲಾಘನಿಯವಾದ್ದದು ಪ್ರತಿಯೋಬ್ಬರು ತಮ್ಮ ಸೇವೆಯ ಜವಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸ ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಸೇವಾ ಸಂಗಮ ಸಂಸ್ಥೆಯ ಸಹನಿರ್ದೇಶಕರಾದ ಫಾದರ ದೀಪಕ್ ಅವರು ಮಾತನಾಡುತಾ ಸೇವಾ ಸಂಗಮ ಸಂಸ್ಥೆ 17 ವರ್ಷಗಳಿಂದ ಈ ಭಾಗದ ಜನರ ಸೇವೆಯಲ್ಲಿ ಅವರ ಅಭಿವೃದ್ದಿ ಕಾರ್ಯದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ವಿವಿದ ರೀತಿಯ ಅಥವಾ ಬೇರೆ ಬೇರೆ ಹಂತದಲ್ಲಿ ರೈತರು ಸರಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಅವರಲ್ಲಿ ಅರಿವು ಮೂಡಿಸುವುದು ಹಾಗೂ ಸಾವಯವ ಕೃಷಿಯ ಕುರಿತಾದ ಕಾರ್ಯಕ್ರಮಗಳು ಸಂಸ್ಥೆಂiÀiಲ್ಲಿ ಜಾರಿಯಲ್ಲಿದೆ.
ಮಹಿಳೆಯರ ಸ್ವಾವಲಂಬನೆ ಜೀವನ ಸಾಗಿಸಲು ಸಮೃದ್ದಿ ಎಂಬ ಕಾರ್ಯಕ್ರಮದ ಮೂಲಕ ಮಹಿಳೆಯರ ಅಭೀವೃದ್ಧಿ ಮತ್ತು 0 ಯಿಂದ 06 ವರ್ಷದ ಒಳಗಿನ ಬೆಳವಣಿಗೆಯಲ್ಲಿ ಕುಂಠಿತ ಗೊಂಡಿರುವ ಮಕ್ಕಳ ಅಭಿವೃದ್ಧಿಗಾಗಿ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಸದಾನಂದ, ಶ್ರೀಮತಿ ಗೌರವಮ್ಮ ಹಾಗೂ ಶ್ರೀ ಶಿವಾನಂದ ಸಾವಳಗಿ ಅವರು ವೇದಿಕಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಪಂಚಾಯತ ಸದಸ್ಯರು ಹಾಗು ಗ್ರಾಮೀಣ ಪುನರವಸತಿ ಕಾರ್ಯಕರ್ತರು ಭಾಗವಹಿಸಿದರು, ಕಾರ್ಯಕ್ರಮವನ್ನು ಶ್ರೀ ರಾಜಕುಮಾರ ನಿರೂಪಿಸಿ, ಶ್ರೀಮತಿ ಜಗದೇವಿ ಸ್ವಾಗತಿಸಿ, ಕು.ಲಕ್ಷ್ಮಿ ಅವರು ವಂದಿಸಿದರು.