ಒಂದು ದಿನದ ಉಪವಾಸ ಪೂರೈಸಿದ ಬಾಲಕ

ಬ್ಯಾಡಗಿ, ಏ19: ತಾಲೂಕಿನ ಬಿಸಲಹಳ್ಳಿ ಗ್ರಾಮದ ಮಹ್ಮದಸೂಫೀಯಾನ ಟಿಪ್ಪುಸುಲ್ತಾನ ಹುಲಮನಿ ಏಳು ವರ್ಷದ ಪುಟ್ಟ ಬಾಲಕ ರಂಜಾನ್ ತಿಂಗಳ ಅಂಗವಾಗಿ ಪ್ರಾರಂಭವಾದ ಉಪವಾಸ ವೃತವನ್ನು ಮೊದಲ ಬಾರಿಗೆ ಒಂದು ದಿನದ ಉಪವಾಸ ಮಾಡುವ ಮೂಲಕ ಪೂರೈಸಿದ್ದಾನೆ.
ಏಳು ವರ್ಷದ ಬಾಲಕ ರಂಜಾನ್ ತಿಂಗಳ ಐದನೇ ಉಪವಾಸ ವೃತವಾದ ಭಾನುವಾರ ಬೆಳಗಿನ ಜಾವದಿಂದ ಸಂಜೆ 6.50.ಗಂಟೆಯವರೆಗೆ ಒಂದು ದಿನದ ಉಪವಾಸವನ್ನು ಪೂರೈಸಿದ್ದಾನೆ.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕನ ಅಜ್ಜಿ ಚಾಂದಬಿ ಹುಲಮನಿ, ಸೃಷ್ಠಿಕರ್ತನು ಉಪವಾಸ ವೃತವನ್ನು ನಮ್ಮ ಆರೋಗ್ಯದ ಸಲುವಾಗಿ ಮಾಡಿದ್ದಾನೆ. ಮಗು ಇದ್ದಾಗಲೇ ಗುರು ಹಿರಿಯರ ಜೊತೆಗೆ ನಡೆದುಕೊಳ್ಳುವ ಕುರಿತು ತಿಳಿಸಬೇಕಾಗಿದೆ. ತಂದೆ ಹಾಗೂ ತಾಯಿಗಿಂತ ಮಿಗಿಲಾದ ದೇವರು ಮತ್ತೊಬ್ಬರಿಲ್ಲ ಎಂಬ ದೈವವಾಣಿಯೇ ಇದ್ದು, ತಾಯಿಯ ಪಾದದಲ್ಲಿಯೇ ಸ್ವರ್ಗವಿದೆ. ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ತಂದೆ ತಾಯಿಯಲ್ಲಿಯೇ ಕಾಣಬೇಕು. ಹಾಗಾಗಿ ಸಣ್ಣ ಮಕ್ಕಳಿದ್ದಾಗಲೇ ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಕಲಿಸಬೇಕಾಗಿದ್ದು ಪ್ರತಿಯೊಬ್ಬ ತಂದೆತಾಯಿಯ ಆದ್ಯ ಕರ್ತವ್ಯವಾಗಿದೆ.