ಒಂದು ತಿಂಗಳಲ್ಲಿ ೧೮೩ ಅಪ್ರಾಪ್ತರ ರಕ್ಷಣೆ

ನವದೆಹಲಿ,ಆ.೩-ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾನವ ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯಲ್ಲಿ ರೈಲ್ವೆ ರಕ್ಷಣಾ ದಳ ೧೮೩ ಅಪ್ರಾಪ್ತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಭಾರತೀಯ ರೈಲ್ವೇ ದೇಶದ ಪ್ರಮುಖ ಸಾರಿಗೆ ಜಾಲವಾಗಿದ್ದು, ಮಾನವ ಕಳ್ಳಸಾಗಣೆದಾರರು ಮೂಲ ಪ್ರದೇಶಗಳಿಂದ ಗಮ್ಯಸ್ಥಾನದ ಪ್ರದೇಶಗಳಿಗೆ ಸಂತ್ರಸ್ತರನ್ನು ಸಾಗಿಸಲು ಬಳಸುತ್ತಾರೆ .ಈ ಹಿನ್ನೆಯಲ್ಲಿ ರೈಲ್ವೆ ಸಂರಕ್ಷಣಾ ಪಡೆ ’ಆಪರೇಷನ್ ಹಾಥ್ ಅಡಿಯಲ್ಲಿ ಅಪ್ರಾಪ್ತ ವಯಸ್ಕರನ್ನು ರಕ್ಷಿಸಿದೆ

ಕಳೆದ ಐದು ವರ್ಷಗಳಲ್ಲಿ ವರ್ಷಗಳಲ್ಲಿ, ಪ್ರಯಾಣಿಕರ ಭದ್ರತೆ-ಸಂಬಂಧಿತ ಕುಂದುಕೊರತೆಗಳ ಪರಿಹಾರಕ್ಕಾಗಿ ರಕ್ಷಣಾ ದಳ ಸಮರ್ಥ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದು ಆ ಮೂಲಕ ಕಳ್ಳ ಸಾಗಾಣಿಕೆದಾರರನ್ನು ಹಿಡಿದಿದೆ.

೨೦೧೭ ರಿಂದ ಆರ್‌ಪಿಎಫ್ ೨೧೭೮ ಜನರನ್ನು ದಂಧೆಕೋರರ ಹಿಡಿತದಿಂದ ರಕ್ಷಿಸಿದೆ.ಒಟ್ಟಾರೆ ೬೫೦೦೦ ಕ್ಕೂ ಹೆಚ್ಚು ಮಕ್ಕಳು ಮತ್ತು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಹಿಳೆಯರು ಮತ್ತು ಪುರುಷರನ್ನು ರಕ್ಷಿಸಿದೆ.

ರೈಲಿನ ಮೂಲಕ ಮಾನವ ಕಳ್ಳಸಾಗಣೆ ವಿರುದ್ಧ ಒಂದು ತಿಂಗಳ ಅವಧಿಯ ವಿಶೇಷ ಅಭಿಯಾನದಲ್ಲಿ ರೈಲ್ವೆ ರಕ್ಷಣಾ ದಳ, ರಾಜ್ಯ ಪೊಲೀಸರ ಸಹಕಾರದಲ್ಲಿ
ಕಳ್ಳಸಾಗಣೆ ಮತ್ತು ಕಳ್ಳಸಾಗಣೆ ಪ್ರಕರಣಗಳ ಪತ್ತೆ ಮಾಡುವಲ್ಲಿ ಯಶಸ್ಬಿಯಾಗಿದೆ.