ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ರಾಗಿ ಆಯ್ಕೆ

ನವದೆಹಲಿ,ಮಾ.೧೮- ದೇಶದಲ್ಲಿ ಶ್ರೀ ಅನ್ನಕ್ಕೆ ಹೆಚ್ಚು ಓತ್ತು ನೀಡುವ ಸಲುವಾಗಿ ದೇಶದ ೧೯ ಜಿಲ್ಲೆಗಳಲ್ಲಿ “ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆಗೆ ರಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದ್ದಾರೆ.
ಭಾರತ ‘ಅಂತಾರಾಷ್ಟ್ರೀಯ ರಾಗಿ ವರ್ಷ’ ಮುನ್ನಡೆಸುತ್ತಿರುವುದಕ್ಕೆ ಹೆಮ್ಮೆ ಇದೆ.ಜಾಗತಿಕ ರಾಗಿ ಸಮ್ಮೇಳನ ಜಾಗತಿಕ ಒಳಿತಿಗಾಗಿ ಮಾತ್ರವಲ್ಲದೆ ಭಾರತದ ಹೆಚ್ಚುತ್ತಿರುವ ಜವಾಬ್ದಾರಿಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿಂದು ಎರಡು ದಿನಗಳ ಜಾಗತಿಕ ಸಿರಿಧಾನ್ಯಗಳ ರಾಜಧಾನಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅಂತರಾಷ್ಟ್ರೀಯ ಮಿಲ್ಲೆಟ್ ವರ್ಷದ ಅಧಿಕೃತ ನಾಣ್ಯವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.ಭಾರತ ಜಿ -೨೦ ಅಧ್ಯಕ್ಷತೆ ವಹಿಸಿರುವ ಸಮಯದಲ್ಲಿ ಧ್ಯೇಯವಾಕ್ಯ ’ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಅಂತರಾಷ್ಟ್ರೀಯ ರಾಗಿ ವರ್ಷದಲ್ಲೂ ಪ್ರತಿಫಲಿಸುತ್ತದೆ. ಹೊಸತನ್ನೂ ಸೃಷ್ಟಿಸುತ್ತಿವೆ ಎಂದಿದ್ದಾರೆ.
“ಭಾರತದ ಪ್ರಸ್ತಾವನೆ ಮತ್ತು ಪ್ರಯತ್ನಗಳ ನಂತರ, ವಿಶ್ವಸಂಸ್ಥೆ ೨೦೨೩ ಅನ್ನು ’ಅಂತಾರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸಿರುವುದು ನಮಗೆ ಅತ್ಯಂತ ಗೌರವದ ವಿಷಯವಾಗಿದೆ. ಭಾರತದ ೭೫ ಲಕ್ಷಕ್ಕೂ ಹೆಚ್ಚು ರೈತರು ಸಮಾರಂಭದಲ್ಲಿ ನಮ್ಮೊಂದಿಗೆ ಇದ್ದಾರೆ ಎಂದು ಅವರು ಹೇಳಿದ್ದಾರೆ.
೨.೫ ಕೋಟಿ ಸಣ್ಣ ರೈತರಿಗೆ ಅನುಕೂಲ ದೇಶದ , “೨.೫ ಕೋಟಿ ಸಣ್ಣ ರೈತರು ರಾಗಿ ಯೊಂದಿಗೆ ನೇರ ಸಂಬಂಧ ಹೊಂದಿದ್ದಾರೆ. ಶ್ರೀ ಅನ್ನದ ಧ್ಯೇಯ ಸಣ್ಣ ರೈತರಿಗೆ ವರದಾನವಾಗಲಿದೆ. ಶ್ರೀ ಅನ್ನ ಮಾರುಕಟ್ಟೆ ಒದಗಿಸುವ ಜೊತೆಗೆ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗೆ ಪ್ರಯೋಜನ ನೀಡುವ ಜೊತೆಗೆ ಆರ್ಥಿಕತೆ ಲಪಡಿಸುತ್ತದೆ ಎಂದಿದ್ದಾರೆ.
ರಾಗಿ ಗ್ರಾಮೀಣಭಾಗದ ರೈತರಿಗೆ ವರದಾನವಾಗಿದೆ.ಇದರಿಂದ ರೈತರಿಗೂ ಮತ್ತಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ವಿಶ್ವಸಂಸ್ಥೆ ೨೦೨೩ ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದ ಪರಿಣಾಮವಾಗಿ ‘ಶ್ರೀ ಅನ್ನ’ಕ್ಕೆ ದೇಶೀಯ ಮತ್ತು ಜಾಗತಿಕವಾಗಿ ಬೇಡಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಇಥಿಯೋಪಿಯನ್ ಅಧ್ಯಕ್ಷ ಸಹ್ಲೆ-ವರ್ಕ್ ಝೆವ್ಡೆ ಮಾತನಾಡಿ “ಮಿಲೆಟ್ಸ್ ೨೦೨೩ ರ ಅಂತರರಾಷ್ಟ್ರೀಯ ವರ್ಷ ಆಚರಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಘೋಷಿಸಿದಂತೆ, ರಾಗಿ ಉತ್ಪಾದನೆ ಹೆಚ್ಚಿಸಲು ಸಾಮೂಹಿಕ ಪ್ರಯತ್ನಗಳ ಪ್ರಯತ್ನಗಳು ಸುಸ್ಥಿರ ಅಭಿವೃದ್ಧಿಗಾಗಿ ೨೦೩೦ ಕಾರ್ಯಸೂಚಿಗೆ ಕೊಡುಗೆ ನೀಡುತ್ತವೆ ಎಂದು ಅವರು ತಿಳಿಸಿದ್ದಾರೆ.