ಒಂದು ಜಾತಿ ಪ್ರಮಾಣ ಪತ್ರಕ್ಕಾಗಿ ಮೂರು ತಿಂಗಳಿಂದ ಪರದಾಟ ಯಡ್ರಾಮಿ ಕಂದಾಯ ಇಲಾಖೆಯ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಡಿವಾಳಪ್ಪ ಟಿ ಯತ್ನಾಳ

ಯಡ್ರಾಮಿ:ಜ.20:ಒಂದು ಜಾತಿ ಪ್ರಮಾಣ ಪತ್ರ ಸಲವಾಗಿ ಮೂರು ತಿಂಗಳಿಂದ ಸುತ್ತಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಯಡ್ರಾಮಿ ಕಂದಾಯ ಆಡಳಿತದ ವಿರುದ್ಧ ಲಕ್ಷ್ಮಣ ಕರಕದಾರ ಯಡ್ರಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಡ್ರಾಮಿ ಪಟ್ಟಣದ ಲಕ್ಷ್ಮಣ ಕರಕದಾರ ಅವರು ಮಗನಾದ ಪ್ರಜ್ವಲ್ ಜೋಗಾರ್ ಪ್ರವರ್ಗ (1)ರ ಜಾತಿ ಪ್ರಮಾಣ ಪತ್ರಕ್ಕಾಗಿ ಅಕ್ಟೋಬರ 2023 ರಿಂದ ಇಲ್ಲಿಯವರೆಗೂ ಮೂರು ತಿಂಗಳಿಂದ ಜಾತಿ ಪ್ರಮಾಣ ಪತ್ರದ ಅರ್ಜಿಯೂ ರದ್ದು ಪಡಿಸುತ್ತಿದ್ದು.

ಯಾಕೆ ಅರ್ಜಿ ರದ್ದುಪಡಿಸುತ್ತಿರಾ ಎಂದು ಕೇಳಿದರೆ ಜಾತಿ ಪ್ರಮಾಣ ಪತ್ರ ಆದಾಯ ಟಿ.ಸಿ.ತರಬೇಕು ಎಂದು ಹೇಳುತ್ತಾರೆ.ಐದನೇ ತರಗತಿ ಓದುವ ಹುಡುಗನಿಗೆ ಟಿ.ಸಿ.ಬರುವದಿಲ್ಲ ಎಂದು ಶಾಲೆಯವರು ಹೇಳುತ್ತಾರೆ ಎಂದು ಅಸಮದಾನ ವ್ಯಕ್ತಪಡಿಸಿದ್ದಾನೆ.

ಜಾತಿ ಪ್ರಮಾಣ ಪತ್ರದ ಅರ್ಜಿ ಸಲ್ಲಿಸುವಾಗ ಹುಡುಗನ ಆಧಾರ್ ಕಾರ್ಯ ಮತ್ತು ಶಾಲಾ ದೃಢೀಕರಣ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿ ಸಲ್ಲಿದ್ದು.ತಲಾಟಿ ಮತ್ತು ಆರ್.ಐ ಅವರು ತನಿಖೆ ಮಾಡಿ ಅರ್ಜಿಯನ್ನು ಮೂರು ಬಾರಿಯೂ ಓಕೆ ಮಾಡಿದರು.

ಕೇಸ್ ವರ್ಕರಾದ ವೈಶಾಲಿ ಮೆಡಮ್ ಅವರು ಜಾತಿ ಪ್ರಮಾಣ ಪತ್ರದ ಎಲ್ಲಾ ವರದಿ ಸಲ್ಲಿಸಿದರು.
ವಿನಾಕಾರಣ ಅರ್ಜಿಯನ್ನು ಮೂರು ಬಾರಿಯೂ ಕೂಡ ರದ್ದು ಮಾಡಿದ್ದಾರೆ.ಕಾರಣ ಕೇಳಿದರೆ ಟಿ.ಸಿ ಬೇಕು ಜಾತಿ ಪ್ರಮಾಣ ಪತ್ರ ಬೇಕು ಆದಾಯ ಬೇಕು 20 ರೂ ಟ್ಯಾಂಪ್ ಪೇಪರ ಬೇಕು ಎಂದು ಹೇಳುತ್ತಾರೆ.

ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿದ್ದು ಜಾತಿ ಪ್ರಮಾಣ ಪತ್ರ ತರಬೇಕು ಎಂದು ಹೇಳುತ್ತಾರೆ.ಜಾತಿ ಪ್ರಮಾಣಕ್ಕಾಗಿ ಅರ್ಜಿ ಸಲ್ಲಿಸಿದ್ದು ಜಾತಿ ಪ್ರಮಾಣ ಪತ್ರ ಎಲ್ಲಿಂದ ತರಬೇಕು. ಆನ್ಲೈನ್ ಸೇಂಟರ್ ಗಳಲ್ಲಿ ಹಾಕಿರುವ ಅರ್ಜಿಗಳು ಮಾತ್ರ ಮಾಡುತ್ತಾಳೆ ಯಾವುದೇ ದಾಖಲೆಗಳು ಇಲ್ಲದೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಕೇಸ್ ವರ್ಕರ ವೈಶಾಲಿ ಮೆಡಮ್ ವಿರುದ್ಧ ಹಲವಾರು ದೂರು?

ತಹಸೀಲ್ದಾರ ಕಚೇರಿಯ ಮುಂದೆ ಇರುವ ಆನ್ಲೈನ್ ಸೇಂಟರ್ ಗಳಲ್ಲಿ ಸಲ್ಲಿಸಿದ ಅರ್ಜಿಗಳಿಗೆ ರದ್ದು ಪಡಿಸದೇ. ನಾಡಕಚೇರಿಯಲ್ಲಿ ಸಲ್ಲಿಸಿದ ಅರ್ಜಿಗಳು ಮಾತ್ರ ಹೆಚ್ಚಾಗಿ ರದ್ದು ಮಾಡುತ್ತಾರೆ ಎಂದು ಸಾರ್ವಜನಿಕರು ದೂರು ನೀಡಿದರು.

ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ತಹಸೀಲ್ದಾರ ವಿರುದ್ಧ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಆನ್ಲೈನ್ ಸೇಂಟರ್ ಜೋತೆಗೆ ಒಪ್ಪಂದ ಮಾಡಿಕೊಂಡು ಕೆಲಸಾ ಮಾಡುತ್ತಿರುವ ಕೇಸ್ ವರ್ಕರ ವೈಶಾಲಿ ಮೆಡಮ್ ಅವರನ್ನು.

ಕೂಡಲೇ ಅಮಾನತ್ತು ಮಾಡಬೇಕು ಹಾಗೂ ಪ್ರತಿದಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಖಾತೆಯನ್ನು ಬೇರೆಯವರಿಗೆ ನೀಡದೇ ಹೋದರೆ ತಸೀಲ್ದಾರ ಕಚೇರಿ ಬಂದ ಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಅವರ ಮೇಲೆ ಈಗಾಗಲೇ ಅರ್ಜಿಗಳು ಬಂದಿದ್ದು ಕೂಡಲೇ ಅವರ ವಿರುದ್ಧ ಕ್ರಮಕೈಗೊಂಡು.ಅವರಿಗೆ ನೀಡಿರುವ ಖಾತೆಗಳು ಬೇರೆಯವರಿಗೆ ನೀಡಿ ಸಾರ್ವಜನಿಕರ ಕೆಲಸಗಳಿಗೆ ಸಹಕಾರ ನೀಡಲಾಗುವುದು.

—ಶಶಿಕಲಾ ಪಾದಗಟ್ಟಿ ತಹಸೀಲ್ದಾರ ಯಡ್ರಾಮಿ.


ವೈಶಾಲಿ ಮೆಡಮ್ ಅವರ ವಿರುದ್ಧ ನೂರಾರು ಜನರಿಂದ ದೂರುಗಳು ಬಂದರು ಕೂಡ ತಹಸೀಲ್ದಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅನುಮಾನ ಮೂಡಿಸುತ್ತಿದೆ.ಹೀಗೆ ಮುಂದಿನ ದಿನಮಾನದಲ್ಲಿ ಮುಂದುವರಿದರೆ ತಾಲೂಕು ಆಡಳಿತದ ಕಚೇರಿಯ ಮುಂದೆ ಉಗ್ರಾವಾದ ಹೋರಾಟ ಮಾಡಲಾಗುವುದು.

—ಶಪೀಉಲ್ಲಾ ದಖನಿ ಬಿಸಿಲು ನಾಡಿನ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷರು ಯಡ್ರಾಮಿ.


ನನ್ನ ಮಗನನ್ನು ಮೊರಾರ್ಜಿ ಶಾಲೆಗೆ ಅರ್ಜಿ ಸಲ್ಲಿಸಲು ಜಾತಿ ಪ್ರಮಾಣ ಪತ್ರ ಬೇಕು ಎಂದು ಹೇಳಿದ್ದಕ್ಕಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದರು ರದ್ದು ಮಾಡುತ್ತಿದ್ದಾರೆ.ಮೊರಾರ್ಜಿ ಶಾಲೆಯ ಅರ್ಜಿಯ ಕಾಲಾವಕಾಶ ಕೂಡ ಮುಗಿದಿದೆ ಅದ್ದಕ್ಕೆ ಕಾರಣ ವೈಶಾಲಿ ಮೆಡಮ್.

—ಲಕ್ಷ್ಮಣ ಕರಕದಾರ ಯಡ್ರಾಮಿ ಅರ್ಜಿಯ ಮಗುವಿನ ತಂದೆ.