
ಕಲಬುರಗಿ:ಮೇ.25: : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಒಂದು ಕೋಟಿ ಸದಸ್ಯರನ್ನು ಭರ್ತಿ ಮಾಡುವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರು ತಿಳಿಸಿದರು.
ಕಲ್ಬುರ್ಗಿ ಆಕಾಶವಾಣಿಯಲ್ಲಿ ಮೇ. 24 ರಂದು “ಜೊತೆ ಜೊತೆಯಲಿ” ನೇರ ಫೆÇೀನ್ – ಇನ್ ಸಂವಾದದಲ್ಲಿ ಮಾತನಾಡಿದ ಅವರು ಸದ್ಯ 4.5 ಲಕ್ಷ ಸದಸ್ಯರಿದ್ದು ಶೀಘ್ರದಲ್ಲಿ ಒಂದು ಕೋಟಿ ಸದಸ್ಯರನ್ನು ಹೊಂದುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಯಾಗಿದ್ದು ಕನ್ನಡಿಗರೆಲ್ಲರೂ ಸ್ವ ಇಚ್ಛೆಯಿಂದ ಈ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಒಂದು ಕೋಟಿ ಸದಸ್ಯರನ್ನು ಹೊಂದುವ ಗುರಿಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು. ಜನಸಾಮಾನ್ಯರು ಕೂಡ ಸದಸ್ಯತ್ವ ಹೊಂದಿ ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತಿಗಳ ಪರಿಷತ್ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಕೇವಲ 250 ರೂ. ಸದಸ್ಯ ತನ ಶುಲ್ಕ ಹಾಗೂ 150 ರೂಪಾಯಿ ಸ್ಮಾರ್ಟ್ ಕಾರ್ಡಿಗೆ ನೀಡಿದರೆ ಗುರುತು ಪತ್ರವನ್ನು ವಿತರಿಸಲಾಗುವುದು. ಈಗಾಗಲೇ ಸದಸ್ಯತ್ವ ಹೊಂದಿದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಪ್ರಗತಿಯಲ್ಲಿದ್ದು ವಿದೇಶದಿಂದ ಸಂಬಂಧ ಪಟ್ಟ ಕಚ್ಚಾ ಸಾಮಗ್ರಿಗಳ ಲಭ್ಯತೆಯ ಕೊರತೆಯಿಂದ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗಿದ್ದು ಶೀಘ್ರದಲ್ಲೇ ಎಲ್ಲ ಸದಸ್ಯರಿಗೂ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಹೇಳಿದರು. ಸಾಹಿತ್ಯ ಪರಿಷತ್ತನ್ನು ಆಧುನಿಕ ತಂತ್ರಜ್ಞಾನದ ವ್ಯವಸ್ಥೆಗೆ ಒಳಪಡಿಸುವಂತೆ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರ ಅಧ್ಯಕ್ಷತೆಯ 11 ಮಂದಿಯ ಸದಸ್ಯ ಸಮಿತಿಯು ಅನೇಕ ತಿದ್ದುಪಡಿ ಗಳನ್ನು ತಂದು ಇದೀಗ ಜಾರಿಯ ಹಂತದಲ್ಲಿದೆ. ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕು, ಕನ್ನಡ ಶಾಲೆಗಳನ್ನು ಮುಚ್ಚಬಾರದು ಕನ್ನಡ ಅನ್ನದ ಭಾಷೆಯಾಗಬೇಕು . ಈ ತಳಹದಿಯಲ್ಲಿ ಈಗಾಗಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಕರ್ನಾಟಕ ಸರಕಾರ ಜಾರಿ ಮಾಡಿದ್ದು ಇದರಿಂದ ಕನ್ನಡದ ಭಾಷೆ ಸಂಸ್ಕøತಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ಸಮಸ್ತ ಕನ್ನಡಿಗರೆಲ್ಲರೂ ಕನ್ನಡದ ರಾಯಭಾರಿಗಳಾಗಿ ಕನ್ನಡ ಕನ್ನಡಿಗ ಕರ್ನಾಟಕ ಪರಿಕಲ್ಪನೆಯಡಿ ಕನ್ನಡವನ್ನು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅಗ್ರಸ್ಥಾನದಲ್ಲಿರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದರು. ಕನ್ನಡಿಗರು ಭಾಷಾ ಕೀಳರಿಮೆಯನ್ನು ಬಿಟ್ಟು ಕನ್ನಡದಲ್ಲಿ ವ್ಯವಹಾರ ನಡೆಸಬೇಕು ಕೇರಳದಲ್ಲಿ ಮಳೆಯಾಳಂ ತಮಿಳುನಾಡಿನಲ್ಲಿ ತಮಿಳು, ಆಂಧ್ರ ಹಾಗೂ ತೆಲಂಗಾಣದಲ್ಲಿ ತೆಲುಗು ಅನುಕ್ರಮವಾಗಿ ಒಂದು ಎರಡು ಮತ್ತು ಮೂರನೇ ಸ್ಥಾನದಲ್ಲಿದೆ ಕನ್ನಡವು 8 ಜ್ಞಾನಪೀಠ ಪ್ರಶಸ್ತಿಗಳನ್ನು ಹೊಂದಿ ವಿದೇಶಿಯರು ಕನ್ನಡವನ್ನು ಕಲಿತು ಕನ್ನಡಕ್ಕೆ ಕಿಟ್ಟಲ್, ಮನ್ರೋ ಮುಂತಾದವರ ಕೊಡುಗೆ ಇದ್ದರೂ ನಾಲ್ಕನೇ ಸ್ಥಾನದಲ್ಲಿರುವುದು ದುಃಖಕರ ವಿಷಯ ಎಂದು ಹೇಳಿದರು. ಸಮಸ್ತ ಕನ್ನಡಿಗರು ಕಂಕಣಬದ್ಧರಾಗಿ ಕನ್ನಡವನ್ನು ಬೆಳೆಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಘವೇಂದ್ರ ಭಕ್ರಿ ಪುರ ,ಕಲಬುರ್ಗಿಯ ಸಿ ಎಸ್ ಮಾಲಿ ಪಾಟೀಲ್ , ರಾಮಪ್ರಸಾದ್ ರೇವಣಸಿದ್ದಯ್ಯ ಸ್ಥಾವರ ಮಠ, ವಾಸುದೇವ ಪಾಟೀಲ್ ವೈಜಾಪುರ, ಧನಲಕ್ಷ್ಮಿ ಪಾಟೀಲ್, ಪ್ರವೀಣ್ ಕುಲಕರ್ಣಿ, ಚಂದ್ರಕಲಾ ಪಾಟೀಲ್, ಚಿತ್ರದುರ್ಗದ ಸುಪುತ್ರಬಾಬು ಮತ್ತಿತರರು ಕರೆ ಮಾಡಿ ಸಂವಾದ ನಡೆಸಿದರು.
ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು .
ಈ ಸಂದರ್ಭದಲ್ಲಿ ಡಾ. ಮಹೇಶ್ ಜೋಶಿ ಅವರನ್ನು ನಿಲಯದ ಮುಖ್ಯಸ್ಥರಾದ ಸಂಜೀವ್ ಮಿರ್ಜಿ , ಸಹಾಯಕ ನಿರ್ದೇಶಕರು (ಇಂಜಿನಿಯರ್) ವಿಭಾಗ ಗುರುಮೂರ್ತಿ ಜಿ. ಕಾರ್ಯಕ್ರಮ ನಿರ್ವಹಣಾಧಿಕಾರಿ ಸೋಮಶೇಖರ ಎಸ್ ರುಳಿ,ಪ್ರಸಾರ ನಿರ್ವಾಹಕರಾದ ಸಂಗಮೇಶ್, ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹೆಚ್ ಎನ್ ಶಾರದಾ ಜಂಬಲ ದಿನ್ನಿ, ಅಶೋಕ್ ಕುಮಾರ್ ಸೋಂಕವಡೆ,ಪ್ರಭು ನಿಷ್ಟಿ, ಅನುಷಾ ಡಿಕೆ ರಾಘವೇಂದ್ರ ಬೋಗ್ಲೆ, ಪಲ್ಲವಿ ಜಾಗಿರದಾರ್ , ಲಕ್ಷ್ಮಿಕಾಂತ್ ಪಾಟೀಲ್ ,ಶ್ರೀಮತಿ ಆರಾಧನಾ ಮತ್ತಿತರರು ಕೃತಿ ನೀಡಿ ಹಾರ್ದಿಕವಾಗಿ
ಸ್ವಾಗತ ಕೋರಿದರು. ಕಲ್ಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಕಾರ್ಯದರ್ಶಿ ಶಿವರಾಜ್ ಅಂಡಗಿ ಸಾಹಿತಿಗಳಾದ ಗುಂಡೇರಾವ್ ಮುಡಬಿ, ಶರಣಬಸಪ್ಪ ಚಪ್ಪರಬಂದಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.