ಒಂದು ಕೋಟಿ ಲಸಿಕೆ ಸಂಗ್ರಹ: ಹರ್ಷವರ್ಧನ್

ನವದೆಹಲಿ,ಮೇ.೧- ಲಸಿಕೆ ಸಂಗ್ರಹ ಇಲ್ಲದಿರುವ ಹಿನ್ನೆಲೆಯಲ್ಲಿ ಇಂದಿನಿಂದ ೧೮ ವರ್ಷ ದಾಟಿದ ಮಂದಿಗೆ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಹಲವು ರಾಜ್ಯಗಳು ಸ್ಪಷ್ಟವಾಗಿ ಹೇಳಿದ ಬೆನ್ನಲ್ಲೇ ರಾಜ್ಯಗಳಲ್ಲಿ ಇನ್ನೂ ೧ ಕೋಟಿ ಡೋಸ್ ಲಸಿಕೆ ಸಂಗ್ರಹವಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ, ಹರ್ಷವರ್ಧನ್ ಹೇಳಿದ್ದಾರೆ.
ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಲಸಿಕೆಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಸಂಗ್ರಹವಿರುವ ಲಸಿಕೆಯನ್ನು ಮೊದಲು ಹಾಕಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.ಆದರೆ ಅಗತ್ಯವಿರುವಷ್ಟು ಲಸಿಕೆ ಸಂಗ್ರಹವಾಗುವರೆಗೆ ಲಸಿಕೆ ಅಭಿಯಾನ ಆರಂಭಿಸಲು ಸಾಧ್ಯವಿಲ್ಲ ಎಂದು ಹಲವು ರಾಜ್ಯಗಳು ಕೇಂದ್ರಕ್ಕೆ ತಿಳಿಸಿವೆ.
ದೇಶದಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ೧೮ ವರ್ಷ ದಾಟಿದ ಎಲ್ಲ ಮಂದಿಗೆ ಇಂದಿನಿಂದ ಲಸಿಕೆ ಹಾಕು ಕೇಂದ್ರ ತೀರ್ಮಾನಿಸಿತ್ತು. ಹಲವು ರಾಜ್ಯಗಳು ಲಸಿಕೆ ಲಭ್ಯವಿಲ್ಲದೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿವೆ.
ಇಂದಿನಿಂದ ಲಸಿಕೆ ಪಡೆಯಲು ೨.೪೫ ಕೋಟಿ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅಗತ್ಯ ಲಸಿಕೆ ಇಲ್ಲದೆ ಜನರಿಗೆ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ,ಪಶ್ಚಿಮ ಬಂಗಾಳ, ಕೇರಳ, ರಾಜಸ್ತಾನ,ಜಾರ್ಖಂಡ್ ಮತ್ತು ಪಂಜಾಬ್ ಇಂದಿನಿಂದ ಲಸಿಕೆ ಹಾಕಲು ಸಾದ್ಯವಿಲ್ಲ. ಮೊದಲು ಅಗತ್ಯವಿರುವ ಪ್ರಮಾಣದ ಲಸಿಕೆ ಪೂರೈಕೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಲ್ಲಿಯವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ೧೬.೫೩ ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ.ಅದರ ಪೈಕಿ ಇನ್ನೂ ೧ ಕೋಟಿ ಡೋಸ್ ಲಸಿಕೆ ಇದೆ. ಲಭ್ಯವಿರುವ ಲಸಿಕೆಯನ್ನು ಮೊದಲು ಹಾಕಿ ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.
ಲಭ್ಯವಿರುವ ಲಸಿಕೆಯನ್ನು ನಂಬಿಕೊಂಡು ಲಸಿಕಾ ಅಭಿಯಾನ ಆರಂಭಿಸಿದರೆ ಅದು ಎರಡು ಮೂರು ದಿನದಲ್ಲಿ ಮುಗಿದು ಹೋಗಲಿದೆ ಮುಂದೆ ಏನು ಮಾಡಬೇಕು ಮೊದಲು ಅಗತ್ಯ ಪ್ರಮಾಣದ ಲಸಿಕೆ ಪೂರೈಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರತಿ ತಿಂಗಳು ೬೭ ಲಕ್ಷದಂತೆ ಲಸಿಕೆ ಅಗತ್ಯವಿದೆ ಅದನ್ನು ಮೊದಲ ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾg