ಒಂದು ಕರೆಯಿಂದ ಮಗುವಿನ ಜೀವನ ರಕ್ಷಿಸಲು ಸಾಧ್ಯ

ಬೀದರ :ಮಾ.17:ನಗರದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ಅಡಿಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರ ವತಿಯಿಂದ ಸರಕಾರಿ ಪ್ರೌಢ ಶಾಲೆ ಸಂಗೋಳಗಿ ಗ್ರಾಮದಲ್ಲಿ ಮಕ್ಕಳ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳಲಾಯಿತು.
ಶ್ರೀ ಅವಿನಾಶ ಬೇವಿನದೊಡ್ಡಿ ಬಾಲವಿವಾಹ ನಿಷೇಧ ಕಾಯ್ದೆ 2006 ರ ಬಾಲವಿವಾಹಕ್ಕೆ ಕಾರಣ ಮತ್ತು ದುಸ್ಪರಿಣಾಮ ಮತ್ತು ಪರಿಹಾರ ಕುರಿತು ಬಾಲ್ಯವಿವಾಹದಲ್ಲಿ ಪಾಲುದಾರರಾದ ವರನ ಕಡೆಯವರು ತಂದೆ ತಾಯಿ, ಭಾವ ಚಿತ್ರ ತೆಗೆಯುವವರು, ಪೂಜಾರಿ ಮತ್ತು ಧರ್ಮಗುರುಗಳು, ಭಟ್ಟರು, ವಾದ್ಯ ಬಾರಿಸುವವರು, ಮದುವೆ ಮಾಡಿಸಿದವರಿಗೆ 1 ಲಕ್ಷ ರೂಪಾಯಿ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಮತ್ತು ಮದುವೆ ಗಂಡಿಗೆ, ಪೋಷಕರಿಗೆ, ಬೆಂಬಲ ಕೊಟ್ಟವರಿಗೆ, ಭಾಗವಹಿಸಿದವರಿಗೆ ಎಲ್ಲರಿಗೂ ಶಿಕ್ಷೆ ಇದೆ. ಎಂದು ಮದುವೆ ಮಾಡುವುದಾದರೆ ಹುಡುಗಿಗೆ 18 ವರ್ಷ ತುಂಬಿರಬೇಕು ಮತ್ತು ಹುಡುಗನಿಗೆ 21 ವರ್ಷ ತುಂಬಿರಬೇಕು. ಅವಾಗ ಮತ್ರ ಮದುವೆ ಮಾಡಿಸಬಹುದುದು. ಎಂದು ಮಾತನಾಡಿದ್ದರು.
ಶ್ರೀ ಜಾನ್ಸನ್ ಕರಂಜಿಕರ್ ರವರು ಮಾತನಾಡಿ ಕಾಣೆಯಾದ ಮಕ್ಕಳು, ದೌರ್ಜನ್ಯಕ್ಕೊಳಗಾದ ಮಕ್ಕಳು, ಓಡಿ ಹೋದ ಮಕ್ಕಳು, ದುರ್ಬಳಕೆಗೋಳಗಾದ ಮಕ್ಕಳು, ಕೆಲಸ ಮಾಡುತ್ತಿರುವ ಮಕ್ಕಳು, ನೈಸರ್ಗಿಕ ವಿಪತ್ತಿನಲ್ಲಿ ಸಿಕ್ಕಿ ಹಾಕಿಕೊಂಡ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆ ಇರುವ ಮಕ್ಕಳು, 1098 ಕ್ಕೆ ಉಚಿತವಾಗಿ ಕರೆ ಮಾಡಿ ಭಾರತದ ಯಾವುದೇ ದೂರವಾಣಿ ಸೇವೆಯಿಂದ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಮಗು ಅಥವಾ ಕಾಳಜಿ ಹೋಂದಿದ ಸಾರ್ವಜನಿಕರು 1098 ಕ್ಕೆ ಕರೆ ಮಾಡಿ ಮಕ್ಕಳ ರಕ್ಷಣೆ ಮಾಡುವಲ್ಲಿ ಎಲ್ಲರು ಕೈಜೋಡಿಸೋಣ ಎಂದು ತಿಳಿಸಿ ಹೇಳಿದ್ದರು.