ಒಂದು ಅವಕಾಶ ನೀಡುವಂತೆ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಮನವಿ

ಕೋಲಾರ, ಮಾ.೧೨- ಹೋಬಳಿ ಕೇಂದ್ರವಾಗಿ ಕೈಗಾರಿಕಾ ಪ್ರದೇಶದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಹೊಂದಿರುವ ನರಸಾಪುರ ಹೋಬಳಿಯನ್ನು ಅಭಿವೃದ್ಧಿ ಪಡಿಸುತ್ತೇನೆ ನನಗೆ ಒಂದು ಅವಕಾಶ ನೀಡುವಂತೆ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮನವಿ ಮಾಡಿದರು.
ತಾಲೂಕಿನ ನರಸಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅವರು
ಕೋಲಾರ ವಿಧಾನಸಭಾ ಕ್ಷೇತ್ರವು ಸವಾಂಗೀಣ ಅಭಿವೃದ್ಧಿಯಾಗಲು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ ಮಾತ್ರ ಸಾಧ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆ ಜನತಾ ಜಲಧಾರೆ, ಪಂಚರತ್ನ ಯೋಜನೆಗಳು ನಾಡಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ಅದ್ಭುತವಾದ ಯಶಸ್ಸಿನೊಂದಿಗೆ ಸಾಗುತ್ತಿದೆ. ನಾಡಿನ ಜನತೆಯ ಕಲ್ಯಾಣವೇ ಜೆಡಿಎಸ್ ಪಕ್ಷದ ಗುರಿಯಾಗಿದ್ದು ಕ್ಷೇತ್ರದ ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆಯಾಗಿದ್ದು ಅವುಗಳನ್ನು ಜಾರಿ ಮಾಡಲು ಅವಕಾಶ ನೀಡಿ ಬೆಂಬಲಿಸಿ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರವಿರಲಿ ಇಲ್ಲದೇ ಹೋದರು ಕೂಡ ಸುಮಾರು ವರ್ಷಗಳಿಂದ ನಿರಂತರವಾಗಿ ಜನರ ಸೇವೆ ಮಾಡುತ್ತಿದ್ದೇನೆ ಕ್ಷೇತ್ರದ ಕಷ್ಟಗಳಿಗೆ ಧ್ವನಿಯಾಗಿದ್ದೇನೆ ಮುಂದೆಯೂ ಕೂಡ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷದ ಪ್ರಣಾಳಿಕೆಯನ್ನು ಹಾಗೂ ಪಂಚರತ್ನ ಯೋಜನೆಯ ಉಪಯೋಗಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸವನ್ನು ಕಾರ್ಯಕರ್ತರು ಮುಖಂಡರು ಮಾಡುತ್ತಾ ಇದ್ದಾರೆ ಎಂದರು.
ನರಸಾಪುರ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಬೆಳದಿದ್ದು ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸಮಾಡಬೇಕು ಯುವಕರು ಈ ದೇಶದ ಆಸ್ತಿ ಕಳೆದ ಹದಿನೈದು ವರ್ಷಗಳಿಂದ ಸರ್ಕಾರಗಳು ದಾರಿ ತಪ್ಪಿಸುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಿದೆ ದುಡಿಯುವ ಯುವ ಜನತೆಯ ಕೈಗಳಿಗೆ ಕೆಲಸ ಕೊಡುವ ಹಾಗೂ ಅವರ ಕುಟುಂಬಗಳನ್ನು ನೆಮ್ಮದಿಯಿಂದ ಬದುಕಲು ರೂಪಿಸಿರುವ ಸ್ವಾಭಿಮಾನ ಕೋಲಾರ ನಿರ್ಮಾಣದ ನನ್ನ ಕನಸಿಗೆ ಸಹಕರಿಸಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಕುಮಾರಸ್ವಾಮಿ ಆಡಳಿತ ವಿಧಾನಗಳು ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಸಿಎಂಆರ್ ಶ್ರೀನಾಥ್ ರವರ ನಾಯಕತ್ವ ಮೆಚ್ಚಿ ತಾವು ಹಾಗೂ ತಮ್ಮ ನೂರಾರು ಬೆಂಬಲಿಗರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ನರಸಾಪುರದ ಅಯ್ಯಪ್ಪ ಸ್ವಾಮಿ ಬಳಗದವರು ಇದೇ ಸಂದರ್ಭದಲ್ಲಿ ತಿಳಿಸಿದ್ದು ಅಲ್ಲದೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನರಸಾಪುರ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರು ಹಾಗೂ ಯುವ ಮುಖಂಡ ಲಕ್ಷ್ಮೀಪತಿ ಸೇರಿದಂತೆ ಯುವಕರು, ಗ್ರಾಮಸ್ಥರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡರಾದ ಬಾಲಗೋವಿಂದ್, ತಾರಕ್ ಮಂಜು, ಮಂಜುನಾಥ್, ಲಕ್ಷ್ಮೀಪತಿ, ಗ್ರಾಮ ಪಂಚಾಯತಿ ಸದಸ್ಯ ಕುಮಾರ್, ಪೈಂಟರ್ ಅಂಜಿ, ಶ್ರೀನಿವಾಸ್, ಭೀಮಣ್ಣ, ಕಿಟ್ಟ, ಮುನಿರಾಜು,ಮುಂತಾದವರು ಇದ್ದರು