ಒಂದು ಅವಕಾಶ ಜೆಡಿಎಸ್‍ಗೆ ಕೊಟ್ಟು ನೋಡಿ ಸೇಡಂ ಮಾದರಿ ಕ್ಷೇತ್ರಕ್ಕೆ ಶ್ರಮಿಸುವೆ : ಬಾಲರಾಜ್ ಗುತ್ತೇದಾರ್

ಸೇಡಂ, ಡಿ, 06 : ಮತಕ್ಷತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಕ್ಕೆ ಅವಕಾಶ ಕೊಟ್ಟು ಆಡಳಿತ ನೋಡಿದ್ದ್ದಿರಿ. ಒಂದು ಅವಕಾಶ ಜೆಡಿಎಸ್ ಪಕ್ಷಕ್ಕೆ ಕೊಟ್ಟು ನೋಡಿ ರಾಜ್ಯದಲ್ಲಿಯೆ ಮಾದರಿಕ್ಷೇತ್ರ ಮಾಡಿ ತೋರಿಸುತ್ತೇನೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಹೇಳಿದ್ದರು.

ಸೇಡಂ ಮತಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷ ತೊರೆದು ಜೆಡಿಎಸ್ ಸೆರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು ರೈತರಿಗೆ,ವಿದ್ಯಾರ್ಥಿಗಳಿಗೆ , ಬಡವರಿಗೆ,ಕೂಲಿಕಾರ್ಮಿಕರ ಪರವಾಗಿ ಅನೇಕ ಯೋಜನೆಗಳು ಜಾರಿಗೆ ತರುತ್ತೇನೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು 2023 ಕ್ಕೆ ಜೆಡಿಎಸ್ ಪಕ್ಷದ ಗೆಲುವಿಗೆ ಒಗ್ಗೂಡಿ ಶ್ರಮಿಸೋಣ ಜೊತೆಗೆ ಸೇಡಂ ಮತಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಸ್ಥಳೀಯ ಸಿಮೆಂಟ್ ಕಾರ್ಖಾನೆಗಳಲ್ಲಿ ಉದ್ಯೊಗ ನೀಡಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ಇಗಾಗಲೆ ಮತಕ್ಷೇತ್ರದ ಜನರ ಸಮಸ್ಯೆ ಅರಿಯಲು ಕ್ಷೇತ್ರದ 133 ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಂಡಿರುವೆ. ಮೊದಲ ಹಂತವಾಗಿ ಸೇಡಂ ಪಟ್ಟಣದ 23 ವಾರ್ಡಗಳಲ್ಲಿ ಈಗಾಗಲೇ ಪಾದಯಾತ್ರೆ ಕೈಗೊಂಡಿದೇನೆ. ಇ ಮೂಲಕ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುವೆ ಎಂದರು.

ಈ ಸಂದರ್ಭದಲ್ಲಿ, ಶಿವರಾಮರೆಡ್ಡಿ ಮುದೋಳ, ಜಗನ್ನಾಥ ರೆಡ್ಡಿ ಗೊಟೂರ್, ಶರಣಪ್ಪ ಬಾಲಾನೋರ್, ನಾಗಣ್ಣ ತಳವಾರ್, ಸಾಬಣ್ಣ ಬಂಕಲಗಿ, ಶಿವಪುತ್ರಪ್ಪ ಮೊಘಾ, ಹಣಮಯ್ಯ ಗುತ್ತೇದಾರ, ಶಿವು ಜಾಡರ, ರಿಯಾಜ್ ಪಟೇಲ, ಅರ್ಜುನ, ರಮೇಶ್ ಗುತ್ತೇದಾರ, ರಾಜು, ಶರಣಪ್ಪ ಅವಂಟಿ, ಬಸವರಾಜ ಪೂಜಾರಿ, ಕಾಶಣ್ಣ ಕೋಳಿ, ಅಯ್ಯಪ್ಪ ಮರಗಣಿ, ಮಲ್ಲು ಜೋಗಿ, ಗುಂಡಪ್ಪ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಬೆನಕನಹಳ್ಳಿ ಗ್ರಾಮಕ್ಕೆ ಜೆಡಿಎಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಅವರಿಗೆ ಗ್ರಾಮಸ್ಥರು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಭವ್ಯ ಮೆರವಣಿಗೆ ಮಾಡಿದರು