ಒಂದುವರೆ ಎಕರೆ ಹೊಲದಲ್ಲಿ ಎರಡುವರೆ ಲಕ್ಷ ಆದಾಯ ಗಳಿಸುತ್ತಿರುವ ರೈತ

ಸೇಡಂ, ಎ,24: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿರುವ ರೈತರಾದ ಶಿವಾನಂದ ಮಡಿವಾಳ ಅವರು ತಮ್ಮ ಒಂದುವರೆ ಎಕ್ಕರೆ ಹೊಲದಲ್ಲಿ 30 ಗುಂಟೆ “ದುಂಡು ಮಲ್ಲಿಗೆ” ದಿನಾಲು 25 ಕೆಜಿ ಬರುತ್ತಿದೆ ಹಾಗೂ 20 ಗುಂಟೆಯಲ್ಲಿ “ಗುಲಾಬಿ ಹೂವು” 15 ಕೆ.ಜಿ ಬರುತ್ತಿದ್ದು ಎರಡು ಸೇರಿ ತಿಂಗಳಿಗೆ ಎರಡುವರೆ ಲಕ್ಷ ಬರುತ್ತಿದೆ ಎಂದು ಸಂಜೆವಾಣಿಗೆ ಮಾಹಿತಿ ನೀಡಿ ಹರ್ಷ ವ್ಯಕ್ತಪಡಿಸಿದ್ದಾರೆ.

2025ರ 15 ಹಳ್ಳಿಗಳಲ್ಲಿ ಶಿವಾನಂದ ಮಡಿವಾಳ ಅವರು ಪ್ರಗತಿಪರ ರೈತರಾಗಿ ನಮ್ಮ ಭಾಗಕ್ಕೆ ಅಪಾರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ.
ಭಗವಂತರಾವ ಪಾಟೀಲ್ ಕೋಂಕನಳ್ಳಿ
2025ರ ಸ್ವರ್ಣ ಜಯಂತಿ ಪ್ರಮುಖರು ಸೇಡಂ