ಒಂದಾನೊಂದು ಕಾಲದಲ್ಲಿ ಟ್ರೈಲರ್ ಬಿಡುಗಡೆ

ಕರಾಟೆಕಿಂಗ್ ಶಂಕರ್ ನಾಗ್ ಅಭಿನಯದ ಒಂದಾನೊಂದು ಕಾಲ ಚಿತ್ರ ತೆರೆಗೆ ಬಂದಿತ್ತು.ಇದೀಗ ಹೊಸಬರ ತಂಡ ಅದೇ ಹೆಸರಲ್ಲಿ ಚಿತ್ರದ ಚಿತ್ರೀರಣ ಅಂತಿಮ ಹಂತದಲ್ಲಿದೆ. ಕನಕಪುರ, ಹಾರೋಹಳ್ಳಿ,ಆನೇಕಲ್, ತಟ್ಟಗೆರೆ, ಹೂಕ್ಲೇರಿ ಕಡೆಗಳಲ್ಲಿ ಚಿತ್ರೀಕರಣ ನಡೆದು ಕೊನೆಯ ಎರಡು ದಿನದ ಕ್ಲೈಮಾಕ್ಸ್‌ನ್ನು ಸಕಲೇಶಪುರದಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.

ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಬಳಿ ಪುನೀತ್ ಅಂಗ ರಕ್ಷಕ ಚಲಪತಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು.

1980ರ ರೆಟ್ರೋದಲ್ಲಿ ನಡೆಯುವ ಕರವಸ್ತ್ರದ ಮೇಲಿನ ಪ್ರೀತಿ ಕತೆ ಇರಲಿದೆ. ನಾಯಕ ಮತ್ತು ನಾಯಕಿ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಕರವಸ್ತ್ರ ಇಬ್ಬರ ನಡುವೆ ಆಟವಾಡಿಸುತ್ತಿರುತ್ತದೆ. ಅದು ಇಬ್ಬರನ್ನು ಹೇಗೆ ಸೇರಿಸುತ್ತದೆ. ಪ್ರೀತಿಯ ಸಂದೇಶ ಯಾವ ರೀತಿ ರವಾನೆಯಾಗುತ್ತಿರುತ್ತದೆ ಎಂಬಂತ ವಿಷಯಗಳನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.

ಎನ್.ಮಂಜುನಾಥ್, ನಿರ್ದೇಶನದ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ.  ಹರ್ಷಲಹನಿ ನಾಯಕಿ.ಇನ್ನುಳಿದಂತೆ ಶೋಭರಾಜ್, ಸಂಗೀತ, ನೀನಾಸಂಸತೀಶ್, ಜಿ.ತರುಣ್‌ಕುಮಾರ್ ಮುಂತಾದವರು ನಟಿಸಿದ್ದಾರೆ.

 ಯಶವಂತ್‌ಭೂಪತಿ ಸಂಗೀತ, ಛಾಯಾಗ್ರಹಣ ಏಳುಕೋಟೆಚಂದ್ರು ಛಾಯಾಗ್ರಹಣ ಚಿತ್ರಕ್ಕಿದೆ. ಟಿ.ಎಸ್.ಗೋಪಲ್ ಬಂಡವಾಳ ಹಾಕಿದ್ದಾರೆ. ಮುನೇಶ್, ಪ್ರಜ್ವಲ್ ಕೈಜೊಡಿಸಿದ್ದಾರೆ.