ಒಂದಾದ ಮುತ್ತು – ವಿಜಯಭಾಸ್ಕರ ರೆಡ್ಡಿ ಬಗೆಹರಿದ ಲಾರಿ ಮಾಲೀಕರ ಸಂಘದ ಗುದ್ದಾಟ

ಬಳ್ಳಾರಿ ಏ 01 : ಕಳೆದ ಹಲವು ದಿನಗಳಿಂದ ಒಂದು ರೀತಿ ಮುಸುಕಿನ ಗುದ್ದಾಟದಿಂದ ಕೂಡಿದ್ದ ಇಲ್ಲಿನ, ಲಾರಿ ಮಾಲೀಕರ ಸಂಘದ ಸಮಸ್ಯೆ ಬಗೆಹರಿದಿದ್ದು. ನಾವೆಲ್ಲಾ ಒಂದೇ ಎಂದು ನಿನ್ನೆ ರಾತ್ರಿ ಸಂಘದಲ್ಲಿ ನಡೆದ ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ಬಳ್ಳಾರಿ ಮುತ್ತು ಮತ್ತು ಮಾಜಿ ಅಧ್ಯಕ್ಷ ಜಿ.ವಿಜಯಭಾಸ್ಕರರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದಲ್ಲಿ ಅವ್ಯವಹಾರ ನಡೆಯುತ್ತಿದೆ. ಲಾರಿ ಮಾಲೀಕರಿಂದ ಸಂಗ್ರಹಿಸುವ ಶುಲ್ಕವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮಾಜಿ ಸಂಸದ ಮತ್ತು ಸಚಿವರ ಹೇಸರೇಳಿಕೊಂಡು
ಲಾರಿ ಮಾಲೀಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಮಾಡಿ. ಬಳ್ಳಾರಿ ರೂರಲ್ ಲಾರಿ ಅಸೋಶಿಯೇಷನ್ ರಚನೆ ಮಾಡಲಾಗಿತ್ತು. ಅಲ್ಲದೆ ಶುಲ್ಕ ಸಂಗ್ರಹಿಸದೇ ನಾವು ಲಾರಿಗಳಿಗೆ ಲೋಡ್ ನೀಡಲಿದೆ ಎಂದು ಸಹ ಲಾರಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಜಿ.ವಿಜಯಭಾಸ್ಕರರೆಡ್ಡಿ ಮತ್ತಿತರರು ಪತ್ರಿಕಾ ಗೋಷ್ಠಿ ಕರೆದು ಆರೋಪ ಮಾಡಿದ್ದರು. ಇದನ್ನು ಲಾರೀ ಮಾಲೀಕರ ಸಂಘ ಅಲ್ಲಗಳೆದಿತ್ತು.
ಆದರೂ ನಂತರ ಶುಲ್ಕ ನೀಡದೇ ಲಾರಿಗಳನ್ನು ಓಡಿಸಲು ಮುಂದಾಗಿದ್ದಕ್ಕೆ ಲಾರೀ ಮಾಲೀಕರ ಸಂಘ ಅದನ್ನು ತಡೆ ಹಿಡಿದಿತ್ತು. ಆಗ ಒಂದಿಷ್ಟು ಗಲಾಟೆಯಾಗಿ ಪರಸ್ಪರ ಕೈಕೈಮಿಲಾಯಿಸಸಿದ್ದು. ಅಲ್ಲದೆ ಎರೆಡು ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಆದರೆ ಪೊಲೀಸರು ಈರೀತಿ ಸಂಘಗಳನ್ನು ಕಟ್ಟಿಕೊಂಡು ಹೊಡೆದಾಟ ಬಡಿದಾಟ ಮಾಡಿಕೊಂಡು ಹೋಗುವುದು ಸರಿಯಲ್ಲ ಎಂದು ಕೇಸು ದಾಖಲಿಸದೇ ಎಲ್ಲರೂ ಕುಳಿತು ಇರುವ ಸಮಸ್ಯೆ ಬಗಹರಿಸಿಕೊಂಡು ಹೋಗುವಂತೆ ಸೂಚಿಸಿದ್ದರು.
ಬಲ್ಲ ಮೂಲಗಳ ಪ್ರಕಾರ ನಗರ ಶಾಸಕ ಸೋಮಶೇಖರರೆಡ್ಡಿ ಅವರು ಮಧ್ಯ ಪ್ರವೇಶ ಮಾಡಿ. ಮುತ್ತು ಮತ್ತು ವಿಜಯಭಾಸ್ಕರರೆಡ್ಡಿ ಅವರ ಮಧ್ಯೆ ಇದ್ದ ವೈಮನಸ್ಸನ್ನು ಸರಿಪಡಿಸಿದ್ದಾರಂತೆ.
ಈ ಹಿನ್ನಲೆಯಲ್ಲಿ ನಿನ್ನೆ ಸಂಜೆ ಲಾರೀ ಮಾಲೀಕರ ಸಂಘದ ಕಚೇರಿಯಲ್ಲಿ ಮುತ್ತು, ವಿಜಯಭಾಸ್ಕರರೆಡ್ಡಿ, ಸಂಘದ ಅಧ್ಯಕ್ಷ ಎಂ.ಮುನ್ನಾಬಾಯಿ ಮೊದಲಾದವರು ಸಭೆ ಸೇರಿ ನಾವೆಲ್ಲಾ ಒಂದೇ ಎಂದು ಹೇಳಿದರು.
ಮುತ್ತು ಅವರು ಮಾತನಾಡಿ ಹಲವುರೀತಿಯ ತಪ್ಪು ತಿಳುವಳಿಕೆಗಳಿಂದ ಪಾರ್ವತಿ ರೋಡ್‍ಲೈನ್ಸ್‍ನ ವಿಜಯಭಾಸ್ಕರ್‍ರೆಡ್ಡಿ ಅವರು ನಮ್ಮ ಕೆಲ ವಿರೋಧಿಗಳ ಬಳಿ ಸೇರಿ ಬೇರೊಂದು ಸಂಘ ಮಾಡಿದ್ದರು. ಆದರೆ ಅವರಿಗೆ ಸೂಕ್ತ ಮಾಹಿತಿ ನೀಡದ ಹಿನ್ನಲೆಯಲ್ಲಿ ಈಗ ಅವರು ನಮ್ಮ ಜೊತೆ ಇರುತ್ತಾರೆಂದು ಹೇಳಿದರು.
ವಿಜಯಭಾಸ್ಕರರೆಡ್ಡಿ ಅವರು ಮಾತನಾಡಿ ಕೆಲವರ ತಪ್ಪು ಸಂದೇಶದಿಂದ ಇನ್ನೊಂದು ಸಂಘ ಮಾಡಿತ್ತು. ಆದರೆ ಈಗ ಒಂದೇ ಸಂಘ ಇರಲಿದೆ ಮತ್ತು ಈ ಹಿಂದೆ ನಾನೇ ಆರಂಭಿಸಿದ್ದ ಕ್ಯೂ ಪದ್ದತಿಯಲ್ಲಿಯೇ ಲೋಡಿಂಗ್ ನಡೆಯಲಿದೆ. ಈಗ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.
ಅಂತೂ ಹಲವು ದಿನಗಳಿಂದ ಹಲವು ರೀತಿಯ ಘಟನೆಗಳಿಗೆ ಸಾಕ್ಷಿಯಾಗಿದ್ದ ಲಾರೀ ಮಾಲೀಕರ ಗುದ್ದಾಟ ಸಧ್ಯಕ್ಕೆ ಸುಖಾಂತ್ಯ ಕಂಡಿದೆ.