ಒಂದಲ್ಲ-ಎರಡಲ್ಲ 40-50 ಕಾಡಾನೆ ಲಗ್ಗೆ: ತಮಿಳುನಾಡು ಭಾಗದಿಂದ ನಿತ್ಯ ಗಜ ಕಂಟಕ

ಚಾಮರಾಜನಗರ, 20:- ಒಂಟಿ ಸಲಗ ಜಮೀನಿಗೆ ಲಗ್ಗೆ ಇಟ್ಟರೇರೈತರ ಸ್ಥಿತಿ ಅಯೋಮಯವಾಗುತ್ತದೆ. ಅಂತಹುದರಲ್ಲಿ, 40-50 ಆನೆಗಳ ಹಿಂಡು ನಿತ್ಯ ಇಲ್ಲಿನ ಜಮೀನುಗಳಿಗೆ ನುಗ್ಗುತ್ತಿದ್ದುರೈತರ ಸ್ಥಿತಿ ಚಿಂತಾಜನಕವಾಗಿದೆ.
ಚಾಮರಾಜನಗರ ತಾಲೂಕಿನ ಅರಕಲವಾಡಿ, ಹೊನ್ನಹಳ್ಳಿ, ಹೊನ್ನಹಳ್ಳಿ ಹುಂಡಿ, ವಡ್ಗಲ್ಪುರ ಸೇರಿದಂತೆ ಕಾಡಂಚಿನ ಗ್ರಾಮಗಳಿಗೆ ತಮಿಳುನಾಡು ಭಾಗದಿಂದ ಗಜಪಡೆ ನಿತ್ಯ ದಾಂಗುಡಿ ಇಡುತ್ತಿದ್ದು ತೆಂಗು, ಬಾಳೆ ಸೇರಿದಂತೆ ಬೆಳೆದಿದ್ದೆಲ್ಲಾ ನಾಶವಾಗುತ್ತಿದೆ.
ಚಾಮರಾಜನಗರತಾಲೂಕಿನಅರಕಲವಾಡಿ ಸುತ್ತಮುತ್ತಲಿನ ಗ್ರಾಮಗಳು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡಲಿದ್ದು ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಗಡಿ ಭಾಗದಲ್ಲಿದೆ. ಆನೆ ಕಂದಕ, ರೈಲ್ವೆ ಕಂಬಿ ತಡೆಗೋಡೆ ಇಲ್ಲದಿರುವ ಪರಿಣಾಮ ತಮಿಳುನಾಡಿನ ಕಾಡಿನಿಂದ ರಾಜ್ಯದ ಜಮೀನುಗಳಿಗೆ 40-50 ಆನೆಗಳ ಗುಂಪು ದಾಂಗುಡಿಇಟ್ಟು ರೈತರ ಕಣ್ಣಲ್ಲಿ ನೀರುತರಿಸುತ್ತಿದೆ.
ತಮಿಳುನಾಡು ಅರಣ್ಯ ಇಲಾಖೆಯೊಟ್ಟಿಗೆ ರಾಜ್ಯದ ಅಧಿಕಾರಿಗಳು ಹೊಂದಾಣಿಕೆ ಸಾಧಿಸದಿರುವುದು, ನಿರಂತರ ಪ್ಯಾಟ್ರೋಲಿಂಗ್ ಮಾಡದಿರುವುದು, ಸಿಬ್ಬಂದಿ ಕೊರತೆ ಜನರನ್ನು ಹೈರಣಾಗಿಸಿದೆ. ಈ ನಡುವೆ, ಸರ್ಕಾರ ಕೊಡುತ್ತಿರುವ ಪರಿಹಾರದ ಮೊತ್ತವೂಯಾವುದಕ್ಕೂ ಬೇಡವಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ: ಚಾಮರಾಜನಗರ ತಹಶಿಲ್ದಾರ್ ಬಸವರಾಜು ಹಾಗೂ ಬಿಆರ್‍ಟಿ ಅಧಿಕಾರಿಗಳ ವಿರುದ್ಧ ವಡ್ಗಲ್‍ಪುರದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದ್ದು ಸಾಕಷ್ಟು ಬಾರಿ ಮನವಿ ಮಾಡಿದರೂ, ಗ್ರಾಮ ವಾಸ್ತವ್ಯದಲ್ಲಿ ವಿಚಾರ ಪ್ರಸ್ತಾಪಿಸಿ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗದಿದ್ದರಿಂದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಸಚಿವರೂ ಇಲ್ಲಾ- ಅನುದಾನವೂ ಸಾಕಾಗುತ್ತಿಲ್ಲ: ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾಡಾನೆ ದಾಳಿ ಪ್ರದೇಶಗಳಿಗೆ ಭೇಟಿಯಿತ್ತು ಮಾತನಾಡಿ, ತಮಿಳುನಾಡು ಭಾಗದಿಂದ ಬರುವ ಕಾಡಾನೆಗಳು ಈ ಭಾಗದ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು, ಗಸ್ತು ನಡೆಸಬೇಕೆಂದು ಸೂಚನೆ ನೀಡಿದ್ದಾರೆ.
ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು. ಆನೆ ಸೇರಿದಂತೆಇತರೆ ಪ್ರಾಣಿಗಳ ಹಾವಳಿಯನ್ನು ತಡೆಯಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನರಾದ ಬಳಿಕ ಆ ಖಾತೆಯೂ ಸಿಎಂ ಅವರ ಬಳಿಯೇ ಇರುವುದರಿಂದ ತ್ವರಿತ ಕ್ರಮಗಳು ಕೈಗೊಳ್ಳಲಾಗುತ್ತಿಲ್ಲ. ಅತಿ ಹೆಚ್ಚು ಆನೆಗಳಿರುವ ಚಾಮರಾಜನಗರವನ್ನು ಆನೆ ಟಾಸ್ಕ್ ಫೆÇೀರ್ಸ್ ಯೋಜನೆಯಿಂದ ಕೈಬಿಟ್ಟಿದ್ದಾರೆ. ತೆಂಗು ನಾಶವಾದರೇ 400-500 ರೂ. ಪರಿಹಾರಕೊಡುತ್ತಿದ್ದು ಇದು ಯಾವುದಕ್ಕೂ ಸಾಲುತ್ತಿಲ್ಲ ಕನಿಷ್ಠ ಒಂದು ಸಸಿಗೆ 4000-5000 ಸಾವಿರರೂ. ಕೊಡಬೇಕು, 3-4 ವರ್ಷ ಸಾಕಿದ ಸಸಿಗಳಿಗೆ 500 ರೂ. ಕೊಟ್ಟರೇ ಪ್ರಯೋಜನವಿಲ್ಲ ಎಂದ ಕಿಡಿಕಾರಿದ್ದಾರೆ.
ಕಾಡಿಗೆ ಹೊಂದಿಕೊಂಡಂತೆ ಕಂದಾಯ ಭೂಮಿ: ಸತ್ಯಮಂಗಲಂಅರಣ್ಯ ಪ್ರದೇಶಕಾಡಿಗೆ ಹೊಂದಿಕೊಂಡಂತೆಕಂದಾಯ ಭೂಮಿಇದೆ. ಇದರಿಂದಾಗಿ, ಕಂದಕ ನಿರ್ಮಿಸಲುಆಗುತ್ತಿಲ್ಲ, ರೈತರುಒಪ್ಪಿಗೆ ಸೂಚಿಸಿ ಭೂಮಿ ಬಿಟ್ಟರೇಕಂದಕ ನಿರ್ಮಿಸಬಹುದು, ಈ ಬಗ್ಗೆ ಪಿಸಿಸಿಎಫ್ ಅವರಿಗೆ ತಿಳಿಸಿ ತಮಿಳುನಾಡು ಅರಣ್ಯ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಲಾಗುವುದುಎಂದು ಬಿಆಟರ್‍ಟಿ ನಿರ್ದೇಶಕಿ ದೀಪಾ ಕಂಟ್ರಾಕ್ಟರ್ ತಿಳಿಸಿದ್ದಾರೆ.
ಒಟ್ಟಿನ ಲ್ಲಿ ತಮಿಳುನಾಡಿನಿಂದ ಕೇವಲ ನೀರಿನಕ್ಯಾತೆ ಅμÉ್ಟೀ ಇಷ್ಟು ದಿನ ಅನುಭವಿಸಬೇಕಾಗಿತ್ತು. ಆದರೆ, ಈಗ ಗಜಕಂಟಕವೂ ಸೃಷ್ಟಿಯಾಗಿದ್ದು ಕಾಡಂಚಿನ ರೈತರು ಕಂಗಲಾಗಿದ್ದಾರೆ.