ಒಂಟಿ ಕಾಲಿನ ಮೇಲೆ ನಿಂತಿರುವ ಕಾಂಗ್ರೇಸ್ ಪಕ್ಷ

ಚಿತ್ರದುರ್ಗ.ಜ.೧೨;: ಒಂಟಿ ಕಾಲಿನ ಮೇಲೆ ನಿಂತಿರುವ ಕಾಂಗ್ರೇಸ್ ಪಕ್ಷ ಯಾವಾಗ ಬೇಕಾದರೂ ಕುಸಿದು ಬಿಳಬಹುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.ನಗರದ ರೆಡ್ಡಿ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೇಸ್ ಪಕ್ಷ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಂಬ ಎರಡು ಆಶ್ರಯ ಕೋಲುಗಳ ಮೇಲೆ ಅವಲಂಬಿಸಿದ್ದು, ಅವರೆಡು  ವಿರುದ್ದ ದಿಕ್ಕಿನಲ್ಲಿ ಇರುವುದರಿಂದ ಒಂಟಿ ಕಾಲಿನ ಮೇಲೆ ನಿಂತಿರುವ ಕಾಂಗ್ರೇಸ್ ಪಕ್ಷ ಯಾವಾಗ ಕುಸಿದು ಬಿಳುತ್ತದೆಯೋ ಗೊತ್ತಿಲ್ಲ. ಇದಕ್ಕೆ ಮೊನ್ನೆ ನಡೆದಂತಹ ಗ್ರಾಮ ಪಂಚಾಯತಿ ಚುನಾವಣೆಯೇ ಸಾಕ್ಷಿಯಾಗಿದೆ ಎಂದರು.ಯಡಿಯೂರಪ್ಪ ಹಲವಾರು ರೈತಪರ ಕೆಲಸಗಳನ್ನು ಮಾಡುವ ಮೂಲಕ ಬೆಳೆ ಪರಿಹಾರ, ನೆರೆ ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ಸರ್ವರಿಗೂ ಸಮಪಾಲು ಎಂಬ ನೀತಿಯಡಿ ಎಲ್ಲಾ ವರ್ಗದವರಿಗೆ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.ಸುವರ್ಣ ಗ್ರಾಮ ಯೋಜನೆಯನ್ನು ಪ್ರಾರಂಭಿಸಿ  ಒಂದು ಗ್ರಾಮಕ್ಕೆ ೧.೫ ಕೋಟಿ ರೂ.ಗಳನ್ನು ನೀಡುವ ಮೂಲಕ  ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಸುವರ್ಣ ಗ್ರಾಮ ಯೋಜನೆಯನ್ನು ಪುನಃ ಪ್ರಾರಂಭಿಸಲು ಸಿಎಂ ಜೋತೆ ಚರ್ಚಿಸಿ ಸಫಲಗೊಳಿಸುತ್ತೇವೆ ಎಂದು ಭರವಸೆ ನೀಡಿದರು.ಕಾಂಗ್ರೇಸ್ ಸರ್ಕಾರ ಗ್ರಾಮ ವಿಕಾಸ ಯೋಜನೆಯನ್ನು ಘೋಷಣೆ ಮಾಡಿತು. ಅದರೆ ಯಾವು ಕೂಡ ಅನುಷ್ಠಾನಕ್ಕೆ ಬರಲಿಲ್ಲ. ಕೇವಲ ಬೋಗಳೆ ಸರ್ಕಾರವಾಗಿ ಕೆಲಸ ಮಾಡಿತು.ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಜಿ.ಹೆಚ.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ಕೆ.ಎಸ್.ನವೀನ್, ಸಿದ್ದೇಶ್ ಯಾದವ್, ಸೇರಿದಂತೆ ಇತರರು ಹಾಜರಿದ್ದರು.