ಒಂಟಿಯಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ತಿರುಗಾಡಬೇಡಿ

ಗಂಗಾವತಿ ಜ.9: ಸಣಾಪುರ, ಆನೆಗೊಂದಿ, ಮಲ್ಲಾಪುರ ಹಾಗೂ ಸಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದ್ದು, ಒಂಟಿಯಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ತಿರುಗಾಡಬೇಡಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ರಫೀ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಆನೆಗೊಂದಿ ಹಾಗೂ ಸಣಾಪುರ ಗ್ರಾಮದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಂಥಾಲಯ ಮೇಲ್ವಿಚಾರಕ ರಮೇಶ ಗಬ್ಬೂರು ಹಾಗೂ ತಂಡದವರು ಚಿರತೆಯಿಂದ ಸಂರಕ್ಷಣೆ ಜಾಗೃತಿ ಗೀತೆಗಳನ್ನು ಹಾಡಿ ಜನರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಪ್ಪ, ಆನೆಗೊಂದಿ ಹಾಗೂ ಸಣಾಪುರ ಪಂಚಾಯತಿಯ ಅಭಿವೃಧ್ದಿ ಅಧಿಕಾರಿಗಳಾದ ಕೃಷ್ಣಪ್ಪ, ಬಸವರಾಜ ಗೌಡರ್, ಬಿಲ್ ಕಲೆಕ್ಟರ್ ರಾಘವೇಂದ್ರ , ದಂತ ವೈದ್ಯ ಡಾ. ಶಿವಕುಮಾರ ಮಾಲಿಪಾಟೀಲ, ಪರಿಸರ ಸೇವಾ ಟ್ರಸ್ಟ್‍ನ ಮಂಜುನಾಥ ಗುಡ್ಲಾನೂರ ಇದ್ದರು.