
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.15: ನಗರದ ಡಾ|| ರಾಜಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್, ವಿದ್ಯಾರ್ಥಿಗಳು ಎಲ್ಲರೂ ಐ.ಸಿ.ಎಸ್.ಸಿ 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ. 100% ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಜೆ. ಅನೀಲ್‍ಕುಮಾರ್‍ರವರು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಭುವನ ಚಂದಿರ 587/600 ಅಂಕಗಳಿಸಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾನೆ. ವಿಧ್ವಾನ್ 570/600 ಅಂಕಗಳಿಸಿ ಶಾಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾನೆ ಹಾಗೂ ತ್ರಿಭುವನ್ 565/600 ಅಂಕಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಶಾಲೆಯ ಒಟ್ಟು 164 ವಿದ್ಯಾರ್ಥಿಗಳಲ್ಲಿ, 23 ವಿಧ್ಯಾರ್ಥಿಗಳು ಶೇಕಡಾ 90 ಅಂಕಗಳ ಮೇಲೆ, 31 ವಿಧ್ಯಾರ್ಥಿಗಳು ಶೇಕಡಾ 80 ಅಂಕಗಳ ಮೇಲೆ, 54 ವಿಧ್ಯಾರ್ಥಿಗಳು ಶೇಕಡಾ 70 ರ ಮೇಲೆ ಹಾಗೂ 44 ವಿಧ್ಯಾರ್ಥಿಗಳು ಶೇಕಡಾ 60 ರ ಮೇಲೆ ಅಂಕಗಳನ್ನು ಪಡೆದಿರುತ್ತಾರೆ.
ಶಾಲೆಯು ಸತತವಾಗಿ 13 ನೇ ವರ್ಷವೂ ಸಹ 100 ರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದು ಇದಕ್ಕೆ ಕಾರಣರಾದ ಪ್ರಾಂಶುಪಾಲರನ್ನು, ಶಿಕ್ಷಕರನ್ನು, ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಶಾಲೆಂiÀi ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಎಸ್.ಜೆ ಮಹಿಪಾಲ್‍ರವರು, ಃIಖಿಒ ನಿರ್ದೇಶಕರಾದ ಡಾ|| ಯಶ್ವಂತ್ ಭೂಪಾಲ್‍ರವರು, ಹಾಗೂ ಟ್ರಸ್ಟಿಗಳಾದ ಶ್ರೀ ಅಶೋಕ ಭೂಪಾಲ್‍ರವರು ಅಭಿನಂದಿಸಿದ್ದಾರೆ.
One attachment • Scanned by Gmail